ಎದುರಾದ ಸಮಸ್ಯೆಗಳು ಮಹಪೂರ

7
ಜಿಲ್ಲಾಪಂಚಾಯಿತಿ ಸದಸ್ಯೆರಿಂದ ಜನಸಂಪರ್ಕ ಸಭೆ

ಎದುರಾದ ಸಮಸ್ಯೆಗಳು ಮಹಪೂರ

Published:
Updated:
ಹುಣಸೂರು ತಾಲ್ಲೂಕಿನ ಬನ್ನಿಕುಪ್ಪೆ ಗ್ರಾಮದಲ್ಲಿ ಬನ್ನಿಕುಪ್ಪೆ ಜಿಲ್ಲಾಪಂಚಾಯಿತಿ ಸದಸ್ಯೆ ಪುಷ್ಪಾ ಅಮರನಾಥ್ ಶುಕ್ರವಾರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು

ಹುಣಸೂರು: ಶಾಲಾ ಕೊಠಡಿಗಳ ಸೂರು ಸೋರುತ್ತಿವೆ, ಆಸನದ ವ್ಯವಸ್ಥೆಯಿಲ್ಲದೆ ವಿದ್ಯಾರ್ಥಿಗಳಿಗೆ ಕೂರಲು ಕಷ್ಟವಾಗುತ್ತಿದೆ... ಹೀಗೆ ಸಮಸ್ಯೆಗಳು ಕೇಳಿಬಂದದ್ದು ತಾಲ್ಲೂಕಿನ ಬನ್ನಿಕುಪ್ಪೆ ಗ್ರಾಮದಲ್ಲಿ ಜಿಲ್ಲಾಪಂಚಾಯಿತಿ ಸದಸ್ಯೆ ಪುಷ್ಪಾ ಅಮರನಾಥ್‌ ಶುಕ್ರವಾರ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯಲ್ಲಿ.

ಬನ್ನಿಕುಪ್ಪೆ,  ಕುಪ್ಪೆ, ಮರಳಯ್ಯನಕೊಪ್ಪಲು ಮತ್ತು ಜಡಗನಕೊಪ್ಪಲು ಗ್ರಾಮಗಳ ಶಾಲೆ ಚಾವಣಿ ಸೋರುತ್ತಿದ್ದು ಅದನ್ನು ಶ್ರೀಘ್ರ ದುರಸ್ತಿ ಮಾಡಿಸಬೇಕು ಎಂದು ಆ ಗ್ರಾಮಗಳ ನಿವಾಸಿಗಳು ಒತ್ತಾಯಿಸಿದರು.

ಇದಕ್ಕೆ ದನಿಗೂಡಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿ ಕುಮಾರ್‌, ಮೂಕನಹಳ್ಳಿ ಮತ್ತು ದೊಡ್ಡೇಗೌಡನ ಕೊಪ್ಪಲು ಗ್ರಾಮದ ಶಾಲೆಯಲ್ಲಿ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಇಲ್ಲದೆ ನೆಲದ ಮೇಲೆ ಮಕ್ಕಳು ಕುಳಿತುಕೊಳ್ಳಬೇಕಾಗಿದೆ. ಕನಿಷ್ಠ 40 ಡೆಸ್ಕ್‌ ಗಳ ಅಗತ್ಯವಿದೆ ಎಂದು ಮನವಿ ಮಾಡಿದರು.

ಸಂಜೀವಿನ ಸ್ವಸಹಾಯ ಸಂಘದ ಸದಸ್ಯರು ಮಾತನಾಡಿ, ತಮ್ಮ ಸಂಘದ ಕಾರ್ಯಚಟುವಟಿಕೆ ನಡೆಸಲು ಗ್ರಾಮದ ಹಳೆ ಪಂಚಾಯಿತಿ ಕಟ್ಟಡವನ್ನು ನೀಡಬೇಕಾಗಿ ಮನವಿ ಮಾಡಿದರು.

ಹೋಬಳಿ ಕೇಂದ್ರದ ಸರ್ಕಾರಿ ಆಸ್ಪತ್ರೆಗೆ ಕಾಪೌಂಡ್‌ ಇಲ್ಲದೆ ಸಮಸ್ಯೆ ಎದುರಾಗಿದೆ. ಜೊತೆಗೆ ನರ್ಸ್‌ಗಳ ಕೊರತೆ ಇದ್ದು ಹೆಚ್ಚುವರಿ ಇಬ್ಬರು ನರ್ಸ್ ನೇಮಕ ಮಾಡಬೇಕಾಗಿದೆ ಎಂದು ಸ್ಥಳೀಯರಾದ ಚಲುವರಾಜ್‌ ಕೋರಿದರು.

ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಪುಷ್ಪಾ ಅಮರನಾಥ್‌, ಬನ್ನಿಕುಪ್ಪೆ ಜಿಲ್ಲಾಪಂಚಾಯಿತಿ ವ್ಯಾಪ್ತಿಯಲ್ಲಿನ ಸಮಸ್ಯೆಗಳ ಪಟ್ಟಿ ಸಿದ್ಧಪಡಿಸಿ ಜಿಲ್ಲಾಮಟ್ಟದ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆಗಳನ್ನು ನೀಗಿಸುವ ದಿಕ್ಕಿನಲ್ಲಿ ಗಮನಹರಿಸುತ್ತೇನೆ ಹಾಗೂ ತಾಲ್ಲೂಕುಮಟ್ಟದ ಅಧಿಕಾರಿಗಳೊಂದಿಗೆ ಮಾತನಾಡಿ ಸ್ಥಳಿಯ ಸಮಸ್ಯೆಗಳನ್ನು ಬಗೆಹರಿಸಲು ಕೋರುತ್ತೇನೆ ಎಂದು ಭರವಸೆ ನೀಡಿದರು.

ಗ್ರಾಮೀಣ ಭಾಗದ ಯುವಕರಿಗೆ ಕೌಶಲ ತರಬೇತಿ ನೀಡಲು ಬನ್ನಿಕುಪ್ಪೆ ಗ್ರಾಮ ಪಂಚಾಯಿತಿ ಹಳೆ ಕಟ್ಟಡ ಬಳಸಿಕೊಳ್ಳಲು ಸೂಚಿಸಿದ ಸದಸ್ಯರು,  ಕೌಶಲ ತರಬೇತಿ ನೀಡುವುದರಿಂದ ಸ್ಥಳೀಯ  ವಿದ್ಯಾವಂತ ಯುವಕರಿಗೆ ಉದ್ಯೋಗ ಸಿಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಬನ್ನಿಕುಪ್ಪೆ  ಪಿಡಿಒ ನರಹರಿ, ಶ್ರೀಶೈಲ, ಆರ್‌ಡಿಪಿಆರ್‌ ಎಂಜಿನಿಯರ್‌ ಎಸ್‌.ಪವಿತ್ರಾ,  ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸಂತೋಷ್‌ ಕುಮಾರ್ ಮತ್ತು ಸದಸ್ಯರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !