ಮಾಲಗತ್ತಿ ದಲಿತ–ಲಲಿತ ಸಾಹಿತಿ

7
ಪ್ರೊ.ಅರವಿಂದ ಮಾಲಗತ್ತಿ ಅಭಿನಂದನಾ ಕಾರ್ಯಕ್ರಮದಲ್ಲಿ ಸಾಹಿತಿ ಸಿಪಿಕೆ

ಮಾಲಗತ್ತಿ ದಲಿತ–ಲಲಿತ ಸಾಹಿತಿ

Published:
Updated:

ಮೈಸೂರು: ಪ್ರೊ.ಅರವಿಂದ ಮಾಲಗತ್ತಿ ಅವರು ದಲಿತ– ಲಲಿತ ಸಾಹಿತಿ ಎಂದು ಹಿರಿಯ ಸಾಹಿತಿ ಪ್ರೊ.ಸಿ.ಪಿ.ಕೃಷ್ಣಕುಮಾರ್‌ (ಸಿಪಿಕೆ) ಅಭಿಪ್ರಾಯಪಟ್ಟರು.

ಪ್ರೊ.ಅರವಿಂದ ಮಾಲಗತ್ತಿ ಅಭಿನಂದನಾ ಸಮಿತಿಯು ಶುಕ್ರವಾರ ಹಮ್ಮಿಕೊಂಡಿದ್ದ ಪ್ರೊ.ಅರವಿಂದ ಮಾಲಗತ್ತಿ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದಲಿತ ಕ್ಷೇತ್ರವನ್ನು ಬಿಟ್ಟು ನೋಡಿದರೂ ಪ್ರೊ.ಮಾಲಗತ್ತಿ ದೈತ್ಯರೇ. ದಲಿತೇತರ ಸಾಹಿತಿಯಾಗೂ ಇವರದು ಬುದ್ಧಿವಂತ ಪ್ರತಿಭೆಯೇ. ಎಲ್ಲ ಸೃಜನಶೀಲ ಪ್ರಕಾರಗಳಲ್ಲಿ ಇವರು ಮೇಲ್ಪಂಕ್ತಿ ತೋರಿದ್ದಾರೆ. ಕವಿತೆ, ಕಾದಂಬರಿ, ವಿಮರ್ಶೆಯಲ್ಲಿ ಇವರು ನಿಪುಣರು. ಸಾಂಸ್ಕೃತಿಕ, ಸಾಮಾಜಿಕ, ಸಾಹಿತ್ಯಿಕ ಕಾಳಜಿ ಇವರ ಸಾಹಿತ್ಯದಲ್ಲಿದೆ ಎಂದು ಅವರು ಶ್ಲಾಘಿಸಿದರು.

‘ಇವರ ‘ಗೌರ್ನಮೆಂಟ್ ಬ್ರಾಹ್ಮಣ’ ಆತ್ಮಕತೆ ಸಾಹಿತ್ಯವೇ ಎಂಬ ಪ್ರಶ್ನೆ ಬಂದಿತ್ತು. ಆಗ ನಾನು ಮನಸ್ಸಿರುವ ಯಾರೇ ಬರೆದರೂ ಅದು ಸಾಹಿತ್ಯವಾಗುತ್ತದೆ ಎಂದು ಹೇಳಿದ್ದೆ. ಸಾಹಿತ್ಯ ಕ್ಷೇತ್ರದಲ್ಲಿ ಉರಿಯುವ ಅಕ್ಷರಗಳನ್ನು ಸೇರಿಸಿದ್ದು ಮಾಲಗತ್ತಿ ಅವರ ವಿಶೇಷತೆ’ ಎಂದು ಅವರು ವರ್ಣಿಸಿದರು.

ಹಂಸಲೇಖ ಸಂಗೀತ ನಿರ್ದೇಶನದ ಪ್ರೊ.ಮಾಲಗತ್ತಿ ಸಾಹಿತ್ಯದ ‘ಗಿಳಿ ಕುಂತು ಕೇಳ್ಯಾವೋ’ ಧ್ವನಿಮುದ್ರಿಕೆ ಬಿಡುಗಡೆಗೊಳಿಸಿದ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್‌ ಮಾತನಾಡಿ, ‘ನಮ್ಮಲ್ಲಿ ಸ್ಪೃಶ್ಯ ಹಾಗೂ ಅಸ್ಪೃಶ್ಯವೆಂಬ ಎರಡು ದೇಶಗಳಿವೆ. ಅಸ್ಪೃಶ್ಯ ಸಮಾಜಕ್ಕೆ ಈಗಲೂ ಮಾನ್ಯತೆ ಇಲ್ಲ. ಆದರೆ, ಈ ಅಸ್ಪೃಶ್ಯ ಸಮಾಜವೇ ಮುಖ್ಯವಾಹಿನಿಯ ಸಮಾಜಕ್ಕೆ ದಾರಿ ತೋರುತ್ತಿದೆ’ ಎಂದರು.

ದಲಿತರ ಕೇರಿಗಳನ್ನು ದೂರ ಇರುವ ಪರಿಪಾಠ ಮುಂದುವರಿದಿದೆ. ದಲಿತರ ಕೇರಿಗಳಿಂದ ಹೊರವರುವ ಪ್ರಭಾವಳಿ ಇಡೀ ದೇಶಕ್ಕೇ ಬೆಳಕು ನೀಡುತ್ತದೆ. ಹಾಗಾಗಿ, ದಲಿತರ ಶಕ್ತಿಯನ್ನು ಕಡೆಗಣಿಸಬಾರದು’ ಎಂದು ವಿಶ್ಲೇಷಿಸಿದರು.

Tags: 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !