ಸೋಮವಾರ, ಸೆಪ್ಟೆಂಬರ್ 27, 2021
22 °C
ಬಿಜೆಪಿ ನಗರ ಘಟಕ, ಮೈಸೂರು ಪ್ರಜ್ಞಾವಂತ ನಾಗರಿಕರ ವೇದಿಕೆ ಪ್ರತಿಭಟನೆ

ದೇಗುಲ ತೆರವು; ಭುಗಿಲೆದ್ದ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ಕಟ್ಟಿರುವ ದೇಗುಲಗಳ ತೆರವು ಕಾರ್ಯಾಚರಣೆಗೆ ಭಾನುವಾರ ವಿವಿಧ ಸಂಘಟನೆಗಳಿಂದ ಪ್ರತಿರೋಧ ವ್ಯಕ್ತವಾಯಿತು.

ಇಲ್ಲಿನ ಅಗ್ರಹಾರದ ನೂರೊಂದು ಗಣಪತಿ ದೇಗುಲವನ್ನು ಸೆ. 22ರಂದು ತೆರವುಗೊಳಿಸಲಾಗುವುದು ಎಂದು ಜಿಲ್ಲಾಡಳಿತ ನೋಟಿಸ್‌ ನೀಡುತ್ತಿದ್ದಂತೆ ಬಿಜೆಪಿ ನಗರ ಘಟಕ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಸಂಸದ ಪ್ರತಾಪಸಿಂಹ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ, ‘1954ರಲ್ಲಿಯೇ ದೇಗುಲ ನಿರ್ಮಾಣ
ವಾಗಿದೆ. 1964ರಲ್ಲಿ ಮುನ್ಸಿಪಾಲಿಟಿ ಕಾಯ್ದೆ ಜಾರಿಗೆ ಬಂದಿದೆ. ಈ ಕಾಯ್ದೆಗೂ ಮುಂಚೆಯೇ ದೇಗುಲ ಅಸ್ತಿತ್ವದಲ್ಲಿದೆ ಎಂದ ಮೇಲೆ ಅಕ್ರಮ ಹೇಗಾಗುತ್ತದೆ’ ಎಂದು ಪ್ರಶ್ನಿಸಿದರು.

‘2009ರ ನಂತರ ಕ್ಯಾತಮಾರನ
ಹಳ್ಳಿ ಹಾಗೂ ಎನ್.ಆರ್.ಕ್ಷೇತ್ರದಲ್ಲಿ ಹಲವು ಮಸೀದಿ ಅನಧಿಕೃತವಾಗಿ ತಲೆ ಎತ್ತಿವೆ. ಇದು ಕೋರ್ಟ್ ಆದೇಶದ ಉಲ್ಲಂಘನೆ ಅಲ್ಲವೆ’ ಎಂದರು.

ಬಿಜೆಪಿ ನಗರ ಘಟಕದ ಅಧ್ಯಕ್ಷ ಶ್ರೀವತ್ಸ, ಪಾಲಿಕೆ ಸದಸ್ಯರಾದ ಶಿವಕುಮಾರ್, ಸೌಮ್ಯಾ ಉಮೇಶ್‌
ಕುಮಾರ್, ಬಿ.ವಿ.ಮಂಜುನಾಥ್, ಎಂ.ಯು.ಸುಬ್ಬಯ್ಯ, ಎಚ್.ಜಿ.ಗಿರಿಧರ್, ವಿ.ಸೋಮಸುಂದರ್, ವಾಣೀಶ್‌
ಕುಮಾರ್, ಕೆ.ಜೆ.ರಮೇಶ್, ಜೋಗಿ
ಮಂಜು ಇದ್ದರು.

ಬಳೆ ತೊಡಿಸಿ ಪ್ರತಿಭಟನೆ: ಶಾಸಕ ತನ್ವೀರ್‌ಸೇಠ್‌ ಕುರಿತು ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಯುವ ಕಾಂಗ್ರೆಸ್‌ ಕಾರ್ಯಕರ್ತರು ಸಂಸದ ಪ್ರತಾಪಸಿಂಹ ಕಚೇರಿಯ ಬಾಗಿಲಿನ ಚಿಲಕಕ್ಕೆ ಬಳೆ ತೊಡಿಸಿ ಪ್ರತಿಭಟನೆ ನಡೆಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು