ಆಕಾಶವಾಣಿ ಸಿಬ್ಬಂದಿಯಿಂದ ಪ್ರತಿಭಟನೆ

7

ಆಕಾಶವಾಣಿ ಸಿಬ್ಬಂದಿಯಿಂದ ಪ್ರತಿಭಟನೆ

Published:
Updated:
Deccan Herald

ಮೈಸೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಕಾಶವಾಣಿ ಮತ್ತು ದೂರದರ್ಶನ ಸಿಬ್ಬಂದಿ ಮಂಗಳವಾರ ಆಕಾಶವಾಣಿ ಕೇಂದ್ರದ ಎದುರು ಪ್ರತಿಭಟನೆ ನಡೆಸಿದರು.

ಆಕಾಶವಾಣಿ ಮತ್ತು ದೂರದರ್ಶನ ಕಾರ್ಯಕ್ರಮಗಳ ಸಿಬ್ಬಂದಿಯ ಜಂಟಿ ಕಾರ್ಯಚರಣೆ ವೇದಿಕೆ ನೇತೃತ್ವದಲ್ಲಿ ಮಧ್ಯಾಹ್ನ 1.30ರ ಭೋಜನ ವಿರಾಮದ ವೇಳೆಯಲ್ಲಿ ಸಿಬ್ಬಂದಿ ಫಲಕಗಳನ್ನು ಹಿಡಿದು, ಘೋಷಣೆಗಳನ್ನು ಕೂಗಿದರು.

25ರಿಂದ 30 ವರ್ಷಗಳ ಕಾಲ ಪದೋನ್ನತಿ ಪಡೆಯದೇ ಇರುವ ಕಾರ್ಯಕ್ರಮ ಸಿಬ್ಬಂದಿಗೆ ಸಿಗಬೇಕಾದ ಪದೋನ್ನತಿಯನ್ನು ಪೂರ್ವಾನ್ವಯವಾಗುವಂತೆ ನೀಡಬೇಕು, ಪ್ರಸಾರ ಭಾರತಿಯ ಕಾರ್ಯಕ್ರಮ ಸೇವೆಯಲ್ಲಿ ಖಾಲಿ ಇರುವ ಉನ್ನತ ಹುದ್ದೆಗಳಿಗೆ ಬೇರೆ ಬೇರೆ ಇಲಾಖೆಗಳಿಂದ ಅಧಿಕಾರಿಗಳನ್ನು ಎರವಲು ಸೇವೆಯ ಮೇಲೆ ನಿಯೋಜಿಸಿರುವುದನ್ನು ತತ್‌ಕ್ಷಣ ವಾಪಸ್ ಕರೆಸಿಕೊಳ್ಳಬೇಕು ಎಂಬುದು ಸೇರಿದಂತೆ ಇನ್ನೂ ಹಲವು ಬೇಡಿಕೆಗಳ ಈಡೇರಿಕೆಗೆ ಅವರು ಒತ್ತಾಯಿಸಿದರು.

ಕಾರ್ಯಕ್ರಮದ ಸಿಬ್ಬಂದಿ ಸಂಘಟನೆ ಸದಸ್ಯರಾದ ಎಚ್.ಶ್ರೀನಿವಾಸ್, ಅಬ್ದುಲ್ ರಶೀದ್, ಟಿ.ಬಿ.ಲಸಿತ, ಬೇದ್ರೆ ಮಂಜುನಾಥ್, ಎನ್.ಕೇಶವಮೂರ್ತಿ, ಜಿ.ಶಾಂತಕುಮಾರ್, ಜಾಂಪಣ್ಣ ಆಶಿಹಾಳ್, ಎಂ.ಶಕುಂತಲಾ, ಎಚ್.ಸಿ.ಹೇಮಕುಮಾರ್ ಪ್ರತಿಭಟನೆಯಲ್ಲಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !