ಭಾನುವಾರ, ಜುಲೈ 25, 2021
25 °C

ಶ್ರವಣದೋಷ ಮೆಟ್ಟಿನಿಂತ ವಿದ್ಯಾರ್ಥಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಪ್ರೇರೆಂಟ್ಸ್‌ ಅಸೋಸಿಯೇಷನ್ ಆಫ್ ಡೆಫ್‌ ಚಿಲ್ಡ್ರನ್‌ ವತಿಯಿಂದ ಇಲ್ಲಿ ನಡೆಯುತ್ತಿರುವ ಇನ್‌ಸ್ಟಿಟ್ಯೂಟ್ ಆಫ್ ಮದರ್ ಅಂಡ್ ಡೆಫ್‌ ಚೈಲ್ಡ್‌ನಲ್ಲಿ ಶಾಲಾಪೂರ್ವ ಶಿಕ್ಷಣ ತರಬೇತಿ ಪಡೆದು ಮುಖ್ಯವಾಹಿನಿಯ ಶಾಲಾ, ಕಾಲೇಜುಗಳಲ್ಲಿ ವ್ಯಾಸಂಗ ಮುಂದುವರಿಸಿದ ಹಲವು ವಿದ್ಯಾರ್ಥಿಗಳು ಪಿಯು ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿದ್ದಾರೆ.

ಶಾಲೆಯ ಶಿಕ್ಷಕಿ ಕೋಮಲಾ ಅವರು ತಮ್ಮ ಶ್ರವಣದೋಷಯುಕ್ತ ಮಗನ ತರಬೇತಿಗಾಗಿ ನಿಲ್ಲಿಸಿದ್ದ ತಮ್ಮ ವ್ಯಾಸಂಗವನ್ನು ಮುಂದುವರೆಸಿ ಈ ಬಾರಿ ಪಿಯು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ್ದಾರೆ. ಇವರನ್ನು ಇನ್‌ಸ್ಟಿಟ್ಯೂಟ್ ಆಫ್ ಮದರ್ ಅಂಡ್ ಡೆಫ್‌ ಚೈಲ್ಡ್‌ನ ಆಡಳಿತ ಮಂಡಳಿ ಅಭಿನಂದಿಸಿದೆ.

ಪೂಜಾ ಶೇ 98, ಪ್ರಜ್ವಲ್ ಶೇ 93,  ನಿರಂಜನ್ ಭಟ್ ಶೇ 82,  ಪ್ರಜ್ಞಾ ಶೇ 84, ಸುಹಾನ್ ರೈ ಶೇ 73, ಐಶ್ವರ್ಯಾ ಶೇ 64, ಸಹನಾ ಬಿರಾದಾರ್ ಶೇ 54, ಜೀವಿಕಾ ಶೇ 74,  ಕೋಮಲಾ ಶೇ 64ರಷ್ಟು ಅಂಕ ಗಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.