ಗುರುವಾರ , ಫೆಬ್ರವರಿ 25, 2021
19 °C

ಆರ್. ಪರಮಶಿವನ್ ರಂಗಯಾನ ಕಾರ್ಯಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕದಂಬ ರಂಗ ವೇದಿಕೆ ವತಿಯಿಂದ ‘ರಂಗಭೂಮಿಯ ಧ್ರುವತಾರೆ ಆರ್.ಪರಮಶಿವನ್ ರಂಗಯಾನ’ ಕಾರ್ಯಕ್ರಮವು ಜ. 20 ರಂದು ಸಂಜೆ 5 ಗಂಟೆಗೆ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಏರ್ಪಡಿಸಲಾಗಿದೆ.

ಲೇಖಕ ಪ್ರೊ.ಸಿ.ವಿ.ಶ್ರೀಧರಮೂರ್ತಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ರಂಗ ರತ್ನಾಕರ ಸಂಸ್ಥೆಯ ಕಾರ್ಯದರ್ಶಿ ಹನ್ಯಾಳು ಗೋವಿಂದೇಗೌಡ ಹಾಗೂ ಕದಂಬ ರಂಗ ವೇದಿಕೆಯ ಅಧ್ಯಕ್ಷ ರಾಜಶೇಖರ ಕದಂಬ ಅತಿಥಿಗಳಾಗಿ ಭಾಗವಹಿಸುವರು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಂದಿನ ಹಾಗೂ ಇಂದಿನ ರಂಗಭೂಮಿಯ ಕೊಂಡಿಯಂತಿದ್ದ ಪರಮಶಿವನ್ ಅವರು ಇಂದು ನಮ್ಮಡನೆ ಇಲ್ಲ. ಆದರೆ, ರಂಗ ಸಂಗೀತದ ಪರಂಪರೆಗೆ ಅವರು ಬಿಟ್ಟು ಹೋದದ್ದು ಮಾತ್ರ ಯಾರೂ ಊಹಿಸಲಾರದಷ್ಟು. ನಮ್ಮಿಂದ ಕಣ್ಮರೆಯಾಗುವವರೆಗೂ ನವೋಲ್ಲಾಸದ ಯುವಕನಂತೆ ರಂಗಗೀತೆಗಳನ್ನು ಹಾಡುತ್ತಲೇ ಹಾರ್ಮೋನಿಯಂ ನುಡಿಸುತ್ತಲೇ ಸಾಗಿದರು ಎಂದು ಶ್ಲಾಘಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು