ಶಂಕುಸ್ಥಾಪನೆ ಕಲ್ಲನ್ನೇ ಮುಚ್ಚಿದ ರೈಲ್ವೆ ಆಸ್ಪತ್ರೆ!

7
ನಂಜರಾಜ ಅರಸು ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರ ಪ್ರತಿಭಟನೆ

ಶಂಕುಸ್ಥಾಪನೆ ಕಲ್ಲನ್ನೇ ಮುಚ್ಚಿದ ರೈಲ್ವೆ ಆಸ್ಪತ್ರೆ!

Published:
Updated:
Deccan Herald

ಮೈಸೂರು: ಇಲ್ಲಿನ ರೈಲ್ವೆ ಆಸ್ಪತ್ರೆಯಲ್ಲಿ ಶಂಕುಸ್ಥಾಪನೆ ಕಲ್ಲನ್ನೇ ಮುಚ್ಚಿದ್ದು ಸಾರ್ವಜನಿಕರ ವ್ಯಾಪಕ ಆಕ್ರೋಶಕ್ಕೆ ಕಾರಣವಾಯಿತು.

ರಾಜ್ಯಪಾಲರಾಗಿದ್ದ ಜಯಚಾಮರಾಜ ಒಡೆಯರ್ ಅವರು 1961ರ ಸೆಪ್ಟೆಂಬರ್ 27ರಂದು ರೈಲ್ವೆ ಆಸ್ಪತ್ರೆಯನ್ನು ಉದ್ಘಾಟಿಸಿದ್ದರು. ಈ ವಿಷಯ ಇರುವ ಕಲ್ಲನ್ನು ಮುಚ್ಚಲಾಗಿತ್ತು.

ಇದನ್ನು ಕಂಡು ಪ್ರತಿಭಟನೆಗಿಳಿದ ಇತಿಹಾಸಕಾರ ನಂಜರಾಜ ಅರಸು ಹಾಗೂ ಕೆಲ ಸಂಘಟನೆಗಳ ಕಾರ್ಯಕರ್ತರು ವಿಷಯವನ್ನು ಅಧಿಕಾರಿಗಳ ಗಮನಕ್ಕೆ ತಂದರು. ರೈಲ್ವೆ ಕಟ್ಟಡಗಳ ಮೇಲೆ ಯಾವುದೇ ವ್ಯಕ್ತಿಯ ಹೆಸರು ಇರಬಾರದು ಎಂಬ ಆದೇಶ ನೀಡಿದ್ದರು. ಹಾಗಾಗಿ, ಇದನ್ನು ಮುಚ್ಚಲಾಯಿತು ಎಂದು ಅಧಿಕಾರಿಗಳು ವಿವರಣೆ ನೀಡಿದರು. ಇದರಿಂದ ಕೋಪಗೊಂಡ ಕಾರ್ಯಕರ್ತರು ಪ್ರತಿಭಟನೆಗೆ ಇಳಿದರು. ಹಾಗಾದರೆ, ಎಲ್ಲ ರೈಲು ನಿಲ್ದಾಣಕ್ಕೆ ಇಟ್ಟಿರುವ ವ್ಯಕ್ತಿಯ ಹೆಸರನ್ನು ತೆರವುಗೊಳಿಸಿ ಎಂದು ಪಟ್ಟು ಹಿಡಿದರು. ನಂತರ, ತಪ್ಪನ್ನು ಸರಿಪಡಿಸಿಕೊಂಡ ಅಧಿಕಾರಿಗಳು ಶಂಕುಸ್ಥಾಪನಾ ಫಲಕಕ್ಕೆ ಮುಚ್ಚಿದ್ದ ಕಲ್ಲನ್ನು ತೆರವುಗೊಳಿಸಿದರು.

ಈ ಕುರಿತು ಸ್ಪಷ್ಟನೆ ನೀಡಿರುವ ರೈಲ್ವೆ ಇಲಾಖೆಯ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಎಸ್.ಜಿ.ಯತೀಶ್, ‘ಸಂವಹನ ಕೊರತೆಯಿಂದ ಕೆಲಸಗಾರರು ಶಂಕುಸ್ಥಾಪನೆ ಕಲ್ಲನ್ನು ಮುಚ್ಚಿದ್ದರು. ಫಲಕವನ್ನು ತೆಗೆಯುವುದಕ್ಕೆ ಅಥವಾ ಮುಚ್ಚುವುದಕ್ಕೆ ರೈಲ್ವೆ ಅಧಿಕಾರಿಗಳು ಯಾವುದೇ ಆದೇಶ ನೀಡಿರುವುದಿಲ್ಲ. ವಿಷಯ ಗಮನಕ್ಕೆ ಬಂದ ಕೂಡಲೇ ಮುಚ್ಚಿದ್ದ ಫಲಕವನ್ನು ತೆರವುಗೊಳಿಸಲಾಗಿದೆ. ಈ ಪ್ರಾಂತ್ಯದ ರೈಲ್ವೆ ಅಭಿವೃದ್ಧಿಗೆ ಮೈಸೂರು ಆಸ್ಥಾನದ ಒಡೆಯರ್ ಅವರ ಕೊಡುಗೆ ಅಪಾರವಾಗಿದೆ. ಅವರನ್ನು ಅಪಮಾನ ಮಾಡುವ ಉದ್ದೇಶ ಇಲ್ಲ’ ಎಂದು ಸ್ಪ‍ಷ್ಟಪಡಿಸಿದ್ದಾರೆ.

ಬಹುಜನ ವಿದ್ಯಾರ್ಥಿ ಸಂಘ, ಅರಸು ಯುವವೇದಿಕೆಯ ಕಾರ್ಯಕರ್ತರು ಪ್ರತಿಭಟನೆಯಲ್ಲಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !