ಮಳೆಗೆ ಉರುಳಿದ ವಿದ್ಯುತ್‌ ಕಂಬಗಳು

ಶುಕ್ರವಾರ, ಮೇ 24, 2019
29 °C

ಮಳೆಗೆ ಉರುಳಿದ ವಿದ್ಯುತ್‌ ಕಂಬಗಳು

Published:
Updated:
Prajavani

ಬೆಟ್ಟದಪುರ: ಬೆಟ್ಟದಪುರ, ಈಚೂರು, ಕೊಣಸೂರು, ಬೆಟ್ಟದತುಂಗ, ಕಿತ್ತೂರು, ಮರುದೂರು ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಬುಧವಾರ ರಾತ್ರಿ ಗಾಳಿಸಹಿತ ಮಳೆಯಾಗಿದ್ದು, 13 ವಿದ್ಯುತ್‌ ಕಂಬಗಳು ಉರುಳಿವೆ.

ಕಿತ್ತೂರು ಮುಖ್ಯರಸ್ತೆಯಲ್ಲಿ ಮರ ಬಿದ್ದು, 6 ವಿದ್ಯುತ್‌ ಕಂಬಗಳು ಉರುಳಿವೆ. ಇದರಿಂದ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಈಚೂರು, ಕೊಣಸೂರು ಗ್ರಾಮಗಳಲ್ಲಿ ಮಳೆಗೆ 7 ವಿದ್ಯುತ್‌ ಕಂಬಗಳು ಬಿದ್ದಿವೆ. ಬೆಟ್ಟದಪುರ ಸುಣ್ಣದಬೀದಿಯಲ್ಲಿರುವ ತೆಂಗಿನ ಮರಕ್ಕೆ ಸಿಡಿಲು ಬಡಿದು ಸುಟ್ಟುಹೋಗಿದೆ. ಕೆಲವೆಡೆ ಶುಂಠಿ, ಹೊಗೆಸೊಪ್ಪು ಬೆಳೆಗೆ ಹಾನಿಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !