ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಡುಗು–ಸಿಡಿಲಬ್ಬರ: ವರ್ಷಧಾರೆ

Last Updated 26 ಮೇ 2020, 1:32 IST
ಅಕ್ಷರ ಗಾತ್ರ

ಮೈಸೂರು: ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆ ಸೋಮವಾರ ರಾತ್ರಿಯೂ ವರ್ಷಧಾರೆಯ ಅಬ್ಬರ ಮುಂದುವರೆಯಿತು.

ಮೈಸೂರಿನಲ್ಲಿ ರಾತ್ರಿ 8.20ರ ಆಸುಪಾಸಿಗೆ ಆರಂಭಗೊಂಡ ಮಳೆ, ಬಿರುಗಾಳಿ–ಗುಡುಗು–ಸಿಡಿಲಬ್ಬರದೊಂದಿಗೆ ಸುರಿಯಿತು.

ಮೈಸೂರು ತಾಲ್ಲೂಕಿನ ವಿವಿಧೆಡೆಯೂ ಮಳೆಯ ಆರ್ಭಟ ಬಿರುಸಿತ್ತು. ವರುಣಾ ಹೋಬಳಿಯ ಮೆಲ್ಲಹಳ್ಳಿ, ವರಕೋಡು, ವಾಜಮಂಗಲ, ನಾಡನಹಳ್ಳಿ, ದೇವಲಾಪುರ ಗ್ರಾಮ ಸೇರಿದಂತೆ ಇನ್ನಿತರೆಡೆ ಮಳೆ ಸುರಿಯಿತು.

ಜಯಪುರ ಹೋಬಳಿಯ ದಡದಹಳ್ಳಿ, ದೊಡ್ಡಹುಂಡಿ, ಮರಟಿ ಕ್ಯಾತನಹಳ್ಳಿ, ಗೋಪಾಲಪುರ, ಗುಮಚನಹಳ್ಳಿ, ಜಯಪುರ, ಟಿ.ಕಾಟೂರು, ಕಡಕೋಳ, ಉದ್ಭೂರು, ದೂರ, ಶ್ರೀರಾಂಪುರ, ಕೇರ್ಗಳ್ಳಿ ಸಾಲುಂಡಿ, ಬೀರಿಹುಂಡಿ, ಹಾರೋಹಳ್ಳಿ ಸೇರಿದಂತೆ ವಿವಿಧೆಡೆಯೂ ವರ್ಷಧಾರೆಯಾಗಿದೆ.

ಪಿರಿಯಾಪಟ್ಟಣವೂ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಮಳೆ ಸುರಿದಿದೆ. ಹನಗೋಡು ಭಾಗದಲ್ಲಿ ಆಲಿಕಲ್ಲು ಮಳೆ ಬಿದ್ದಿದೆ. ನಂಜನಗೂಡಿನಲ್ಲಿ ಮಳೆಗಿಂತ ಗಾಳಿಯ ಅಬ್ಬರವೇ ಹೆಚ್ಚಿತ್ತು. ಕೆ.ಆರ್.ನಗರದಲ್ಲಿ ಗುಡುಗಿನ ಅಬ್ಬರ ಜೋರಿತ್ತು. ಸಾಧಾರಣ ಮಳೆಯಾಗಿದೆ.

ಜಿಲ್ಲೆಯ ವಿವಿಧೆಡೆ ಮೋಡ ಕವಿದ ವಾತಾವರಣವಿದ್ದು, ಕೆಲವೆಡೆ ಮಳೆಗಿಂತ ಗುಡುಗು–ಮಿಂಚಿನ ಆರ್ಭಟವೇ ಹೆಚ್ಚಿತ್ತು. ಇದೀಗ ಸುರಿಯುತ್ತಿರುವ ಮಳೆ, ಮುಂಗಾರು ಪೂರ್ವ ಬೆಳೆಗಳಿಗೆ ಅನುಕೂಲಕಾರಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT