ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಗೌರವ

ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯಿಂದ ಕಾರ್ಯಕ್ರಮ ಆಯೋಜನೆ
Last Updated 13 ನವೆಂಬರ್ 2020, 2:11 IST
ಅಕ್ಷರ ಗಾತ್ರ

ಮೈಸೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಮತ್ತು ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ವತಿಯಿಂದ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನದಲ್ಲಿರುವ ಗಾಂಧೀಜಿ ಪ್ರತಿಮೆಗೆ ಪುಷ್ಪಾರ್ಚನೆ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಿಗೆ ಅಭಿನಂದನಾ ಕಾರ್ಯಕ್ರಮವನ್ನು ಗುರುವಾರ ಆಯೋಜಿಸಲಾಯಿತು.

ಉದ್ಯಾನದಲ್ಲಿ ಭಗ್ನಗೊಂಡಿದ್ದ ಗಾಂಧಿ ಪ್ರತಿಮೆಯನ್ನು ಇತ್ತೀಚೆಗೆ ದುರಸ್ತಿಗೊಳಿಸಲಾಗಿತ್ತು. ಈ ಹಿನ್ನೆಲೆ ಯಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ರಾಜ್ಯೋತ್ಸವ ಪ್ರಶಸ್ತಿ ಪಡೆದ ಡಾ. ಪುಟ್ಟಸಿದ್ದಯ್ಯ, ಡಾ.ಎ.ಎಸ್.ಚಂದ್ರ ಶೇಖರ್, ಎನ್.ಎಸ್.ಜನಾರ್ಧನ ಮೂರ್ತಿ, ಸಿ.ಮಹೇಶ್ವರನ್ ಅವರನ್ನು ಪಾಲಿಕೆ ಸದಸ್ಯೆ ಎಂ.ಪ್ರಮೀಳಾ ಭರತ್ ಸನ್ಮಾನಿಸಿದರು.

ನಿವೃತ್ತ ಪ್ರಾಧ್ಯಾಪಕ ಪ್ರೊ.ಬಿ.ಪಿ.ಮಹೇಶ್‌ಚಂದ್ರ ಗುರು, ಲಕ್ಷ್ಮೀಪುರಂ ಪೊಲೀಸ್ ನಿರೀಕ್ಷಕ ಆರ್.ವೆಂಕಟೇಶ್ ಅವರನ್ನೂ ಗೌರವಿಸಲಾಯಿತು.

ಮಹೇಶ್ ಚಂದ್ರ ಗುರು ಮಾತನಾಡಿ, ‘ನಾವು ಪಡೆದುಕೊಂಡಿರುವ ಸ್ವಾತಂತ್ರ್ಯ ವನ್ನು ಉಳಿಸಿಕೊಳ್ಳಬೇಕಾದರೆ ಗಾಂಧಿ ಮಾರ್ಗದಲ್ಲಿ ನಡೆಯಬೇಕು. ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರು ತೋರಿಸಿದ ಮಾರ್ಗವನ್ನು ಅನುಸರಿಸಬೇಕು. ಗಾಂಧಿ ಅವರು ಕಟ್ಟುವ ಮತ್ತು ಬೆಳೆಸುವ ಸಂಕೇತವಾಗಿ ಕಂಡರೆ, ಗೋಡ್ಸೆ ಅವರು ಧ್ವಂಸದ ಸಂಕೇತ. ನಮಗೆ ಬೇಕಾಗಿರುವುದು ಗಾಂಧಿ ಮಾರ್ಗಿಗಳೇ ಹೊರತು ನಾಶ ಗೊಳಿಸುವವರಲ್ಲ’ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು ಮಾತನಾಡಿ, ‘ಉದ್ಯಾನದಲ್ಲಿರುವ ಗಾಂಧಿ ಪ್ರತಿಮೆ ಯನ್ನು ಯಾರೋ ಭಗ್ನಗೊಳಿಸಿದ್ದರು. ಗಾಂಧೀಜಿ ಕೈಯಲ್ಲಿದ್ದ ಕೋಲು ಕಾಣೆಯಾ ಗಿತ್ತು. ಇನ್ನು ಮುಂದೆ ಇಂತಹ ಘಟನೆ ನಡೆಯದಂತೆ ಸಂಬಂಧಪಟ್ಟವರು ಎಚ್ಚರವಹಿಸಬೇಕು’ ಎಂದರು.

ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ರಾಜ್ಯಾಧ್ಯಕ್ಷ ಡಾ.ಸಿ.ವೆಂಕಟೇಶ್, ಕನ್ನಡ ಸಾಹಿತ್ಯ ಕಲಾ ಕೂಟ ಅಧ್ಯಕ್ಷ ಎಂ.ಚಂದ್ರಶೇಖರ್, ಲೋಕೇಶ್ ಕುಮಾರ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT