ಬೆಟ್ಟದಪುರ: ರಾಮಮಂದಿರ ಬೆಂಕಿಗೆ ಆಹುತಿ

7

ಬೆಟ್ಟದಪುರ: ರಾಮಮಂದಿರ ಬೆಂಕಿಗೆ ಆಹುತಿ

Published:
Updated:
Prajavani

ಬೆಟ್ಟದಪುರ: ಇಲ್ಲಿನ ಉಪ್ಪಾರ ಬೀದಿಯಲ್ಲಿರುವ ರಾಮ ಮಂದಿರಕ್ಕೆ ಶನಿವಾರ ತಡರಾತ್ರಿ ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ಹೊತ್ತಿಕೊಂಡಿದ್ದು, ಮಂದಿರ ಬಹುಪಾಲು ಸುಟ್ಟುಹೋಗಿದೆ.

ದೇವರಿಗೆ ಶನಿವಾರ ಸಂಜೆ ಪೂಜೆ ಸಲ್ಲಿಸಿದ ಬಳಿಕ ಮಂದಿರಕ್ಕೆ ಬೀಗ ಹಾಕಲಾಗಿತ್ತು. ಮಧ್ಯರಾತ್ರಿ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿದೆ. ಇದನ್ನು ಗಮನಿಸಿದ ಸ್ಥಳೀಯರು ನೀರು ಹಾಕಿ ಬೆಂಕಿ ನಂದಿಸಿದ್ದಾರೆ.

ಮಂದಿರದ ಒಳಗಿದ್ದ ರಾಮ ಮೂರ್ತಿ, ಗ್ರಾಮ ದೇವತೆಗಳಾದ ಶಾಂತವೀರಮ್ಮ ಹಾಗೂ ಅಂತರಗಟ್ಟೆ ಯಮ್ಮ ಉತ್ಸವ ಮೂರ್ತಿಗಳನ್ನು ಸಂರಕ್ಷಿಸಲಾಗಿದೆ. ಪೂಜಾ ಸಾಮಗ್ರಿಗಳು ಹಾಗೂ ದೇವರ ಉಡುಗೆಗಳು ಬೆಂಕಿಗೆ ಆಹುತಿಯಾಗಿವೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !