ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುದ್ಧಿಜೀವಿಗಳಲ್ಲ, ಲದ್ದಿಜೀವಿಗಳು: ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಆಕ್ರೋಶ

Last Updated 15 ಡಿಸೆಂಬರ್ 2021, 21:58 IST
ಅಕ್ಷರ ಗಾತ್ರ

ಮಡಿಕೇರಿ: ‘ಮೈಸೂರಿನ ರಂಗಾಯಣದ ವಿರುದ್ಧ ಎಡಪ‍ಂಥೀಯರ ಗುಂಪು ನಿರಂತರವಾಗಿ ಪಿತೂರಿ ನಡೆಸುತ್ತಿದೆ. ಅಲ್ಲಿ ಒಳ್ಳೆಯ ಕಾರ್ಯಕ್ರಮಕ್ಕೆ ಅಡ್ಡಗಾಲು ಹಾಕುವ ಸಣ್ಣ ಗುಂಪಿದೆ. ತಮ್ಮನ್ನು ತಾವೇ ಬುದ್ಧಿಜೀವಿಗಳು, ಪ್ರಗತಿಪರರು ಎಂದು ಕರೆದುಕೊಂಡಿರುವವರು ಬುದ್ಧಿಜೀವಿಗಳಲ್ಲ, ಲದ್ದಿಜೀವಿಗಳು’ ಎಂದು ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಕಿಡಿಕಾರಿದರು.

‘ನಾನು ನಿರ್ದೇಶಕನಾಗಿ ನೇಮಕವಾದಾಗ ಟಿಪ್ಪು ಸುಲ್ತಾನ್‌ ವಿಷಯವನ್ನು ಮುಂದಿಟ್ಟುಕೊಂಡು ಒಂದು ಗುಂಪು ಗಲಾಟೆ ನಡೆಸಿತ್ತು. ಈಗ ರಂಗಾಯಣದ ಬಹುರೂಪಿ ನಾಟಕೋತ್ಸವಕ್ಕೆ ಮಾಳವಿಕಾ ಅವಿನಾಶ್‌ ಹಾಗೂ ಚಕ್ರವರ್ತಿ ಸೂಲಿಬೆಲೆ ಅವರನ್ನು ಆಹ್ವಾನಿಸಿರುವುದಕ್ಕೆ ಕೆಲವರು ಗಲಾಟೆ ನಡೆಸುತ್ತಿದ್ದಾರೆ. ಬುದ್ಧಿಯಿರುವವರು ಗಲಾಟೆ ಮಾಡುವುದಿಲ್ಲ. ಯೋಧ ಪರಂಪರೆಯ ಕೊಡಗು ಜಿಲ್ಲೆಯವನಾದ ನಾನು ಯಾರಿಗೂ ಹೆದರುವುದಿಲ್ಲ. ಪುಟಗೋಸಿಗಳಿಗೆ ಹೆದರದೇ ಧೈರ್ಯವಾಗಿ ನನ್ನ ಕೆಲಸವನ್ನು ಮಾಡುತ್ತೇನೆ’ ಎಂದು ನಗರದಲ್ಲಿ ಬುಧವಾರ ಸುದ್ದಿಗಾರರಿಗೆ ತಿಳಿಸಿದರು.

‘ಬಿಜೆಪಿ ಸರ್ಕಾರದಿಂದ ನೇಮಕವಾದವನು, ಆರ್‌ಎಸ್‌ಎಸ್‌ ಹಿನ್ನೆಲೆಯುಳ್ಳವನು ಎಂದು ಕೆಲವರಿಗೆ ಕಿರಿಕಿರಿಯಾಗಿದೆ. ಅವರಿಗೆ ಲಸಿಕೆ ಕಂಡು ಹಿಡಿಯುತ್ತೇವೆ. 32 ವರ್ಷಗಳ ಕಾಲ ಎಡಪಂಥೀಯ ಚಿಂತನೆಯಿದ್ದಾಗ ಆರ್‌ಎಸ್‌ಎಸ್‌ ಹಾಗೂ ಬಿಜೆಪಿಯವರು ಹೋಗಿ ತಡೆ ಹಾಕಿದ್ದರೇ? ರಂಗಭೂಮಿಯಲ್ಲಿ ಎಡ– ಬಲ ಎಂಬುದು ಇಲ್ಲ. ‘ಆಹ್ವಾನಿಸಿರುವ ಅತಿಥಿಗಳನ್ನು ಯಾವ ಕಾರಣಕ್ಕೂ ಬದಲಾವಣೆ ಮಾಡುವುದಿಲ್ಲ’ ಎಂದು ಪ್ರತಿಪಾದಿಸಿದರು.

ಮೈಸೂರಿನ ರಂಗಾಯಣವು ಭಾರತದ ಅದ್ಭುತ, ಪ್ರತಿಷ್ಠಿತ ರಂಗಸಂಸ್ಥೆ. ನಿರ್ದೇಶಕನಾಗಿ ನೇಮಕವಾದ ಎರಡು ವರ್ಷದಿಂದ ಅನೇಕ ರಂಗ ಚಟುವಟಿಕೆ ನಡೆಸಿದ್ದೇನೆ. ಎಸ್‌.ಎಲ್‌.ಭೈರಪ್ಪ ಅವರ ಪರ್ವ ಕಾದಂಬರಿ ಆಧರಿಸಿ ರೂಪಿಸಿದ ನಾಟಕಕ್ಕೆ ದೇಶದಾದ್ಯಂತ ಉತ್ತಮ ಪ್ರತಿಕ್ರಿಯೆ ದೊರಕಿದೆ. ಎಲ್ಲವೂ ಚೆನ್ನಾಗಿ ನಡೆಯುತ್ತಿರುವಾಗ ಒಂದು ಗುಂಪು ಪಿತೂರಿ ನಡೆಸುತ್ತಿದೆ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT