ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿಯೊಂದಿಗೆ ಯೋಗ: ಪಾಲ್ಗೊಂಡವರಿಗೆ ಪುಳಕ

Last Updated 21 ಜೂನ್ 2022, 12:54 IST
ಅಕ್ಷರ ಗಾತ್ರ

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಉಪಸ್ಥಿತಿಯಲ್ಲಿ ನಡೆದ ಕಾರಣಕ್ಕಾಗಿ ವಿಶ್ವದ ಗಮನಸೆಳೆದ ‘ಅಂತರರಾಷ್ಟ್ರೀಯ ಯೋಗ ದಿನಾಚರಣೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿವಿಧ ವರ್ಗದ ಸಾವಿರಾರು ಮಂದಿ ಪುಳಕ ಅನುಭವಿಸಿದರು.

ಬಾಲಕರು, ಬಾಲಕಿಯರು, ಯುವಕರು, ಯುವತಿಯರು, ಪುರುಷರು, ಮಹಿಳೆಯರು, ವೃದ್ಧರು, ವಿವಿಧ ವೃತ್ತಿಗಳಲ್ಲಿ ತೊಡಗಿರುವವರು ಭಾಗವಹಿಸಿದ್ದರು. ಯೋಗವನ್ನು ವಿಶ್ವಮಾನ್ಯಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿರುವ ನಾಯಕನೊಂದಿಗೆ ಯೋಗಾಸನಗಳನ್ನು ಮಾಡಿದ್ದಕ್ಕೆ, ಅದರಲ್ಲೂ ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ಬಹುತೇಕರು ರೋಮಾಂಚನ ವ್ಯಕ್ತಪಡಿಸಿದರು. ಅವರ ಮೊಗದಲ್ಲಿ ಹೆಮ್ಮೆಯೂ ತುಳುಕುತ್ತಿತ್ತು. ಪ್ರಧಾನಿಯನ್ನು ದೂರದಿಂದ ಕಣ್ತುಂಬಿಕೊಂಡು ಖುಷಿಪಟ್ಟರು. ಪಾಲ್ಗೊಂಡಿದ್ದವರಲ್ಲಿ ಕೆಲವರ ಪ್ರತಿಕ್ರಿಯೆಗಳು ಇಲ್ಲಿವೆ.

ಹೆಮ್ಮೆಯ ಭಾವ ಮೂಡಿದೆ

ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷ. ಅದರಲ್ಲೂ ‌ಪ್ರಧಾನಿ ಅವರ ಸಮ್ಮುಖದಲ್ಲಿ ನಡೆದ ಅಭ್ಯಾಸದಲ್ಲಿ ಪಾಲ್ಗೊಂಡಿದ್ದಕ್ಕೆ ಖುಷಿಯಾಗಿದೆ. ಮಾನವೀಯತೆಗಾಗಿ ಯೋಗ ಎನ್ನುವ ಈ ಬಾರಿಯ ಘೋಷವಾಕ್ಯವೂ ವಿಶೇಷವಾಗಿದೆ. ಮೈಸೂರಿನಲ್ಲಿ ನಡೆದ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಇತಿಹಾಸದ ಪುಟದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವಂಥದ್ದಾಗಿದೆ. ಎಲ್ಲರೂ ಯೋಗವನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಲು ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಬೇಕು.

ಸೌಮ್ಯಾ ಬಸವರಾಜ್, ಪ್ರಾಂಶುಪಾಲೆ, ಕಾವೇರಿ ಸಂಸ್ಥೆಗಳ ಸಮೂಹ, ಸರಸ್ವತಿಪುರಂ

ಪ್ರಧಾನಿ ಅವರೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಕ್ಕೆ ತುಂಬಾ ಖುಷಿಯಾಗಿದೆ. ಇದೇ ಮೊದಲ ಬಾರಿಗೆ ಸಾರ್ವಜನಿಕ ಸಮಾರಂಭವೊಂದರಲ್ಲಿ ನಾನು ಯೋಗಾಸನಗಳನ್ನು ಮಾಡಿದೆ. ಇಂಥದೊಂದು ಅವಕಾಶ ಒದಗಿಸಿಕೊಟ್ಟವರಿಗೆ ಧನ್ಯವಾದ ಸಲ್ಲಿಸುತ್ತೇನೆ.

ದಿವ್ಯಾ ಎಸ್., ಕೆ.ಬಿ.ಎಲ್. ಲೇಔಟ್

ನಾನು ಎರಡು ವರ್ಷದಿಂದ ಯೋಗಾಭ್ಯಾಸದ ತರಬೇತಿ ಪಡೆಯುತ್ತಿದ್ದೇನೆ. ಇದರಿಂದ ತುಂಬಾ ಬದಲಾವಣೆ ಆಗಿದೆ. ತೂಕ ಇಳಿದಿದೆ. ಮನಸ್ಸು ಹಗುರವಾಗಿರುವ ಭಾವವಿರುತ್ತದೆ. ಈಗ, ಸಾವಿರಾರು ಜನರ ಸಮ್ಮುಖದಲ್ಲಿ ಅದರಲ್ಲೂ ಅರಮನೆ ಆವರಣದಲ್ಲಿ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ಬಹಳ ಖುಷಿಯಾಗಿದೆ.

ರವಿಕೃಷ್ಣ, 7ನೇ ತರಗತಿ ವಿದ್ಯಾರ್ಥಿ, ಕುಂಬಾರಕೊಪ್ಪಲು

ಮಾಹಿತಿ ಕೊಡದಿದ್ದಕ್ಕೆ ಬೇಸರ

ನಿತ್ಯವೂ ಯೋಗಾಭ್ಯಾಸ ಮಾಡುತ್ತೇನೆ. ಹಿಂದಿನ ಯೋಗ ದಿನಗಳಂದು ನಮ್ಮ ತಂಡದ ನೂರಾರುಸಂಖ್ಯೆಯಜನರೊಂದಿಗೆ ಯೋಗಾಸನ ಮಾಡುತ್ತಿದ್ದೆವು. ಈ ಬಾರಿ ಸಾವಿರಾರು ಜನರೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಸಂತಸ ತಂದಿದೆ. ಅದರಲ್ಲೂ ಪ್ರಧಾನಿ ಅವರೊಂದಿಗೆ ಯೋಗ ಮಾಡಿದ್ದು ಹೆಮ್ಮೆಯ ವಿಷಯವೇ ಸರಿ. ಪ್ರವೇಶ ಪಡೆಯಲು ಕಷ್ಟವಾದರೂ, ಕಾರ್ಯಕ್ರಮ ಮುಗಿದ ನಂತರ ಖುಷಿಯ ಫೀಲಿಂಗ್‌ ಇದೆ. ಪರ್ಸ್‌ (ವ್ಯಾಲೆಟ್) ತರಬಾರದು ಎಂದು ಮೊದಲೇ ತಿಳಿಸಿರಲಿಲ್ಲ. ಭದ್ರತಾ ಸಿಬ್ಬಂದಿ ಅದನ್ನೂ ವಶಕ್ಕೆ ಪಡೆದಿದ್ದರು. ಇದರಿಂದ ಬೇಸರವಾಯಿತು.

ಈರಣ್ಣ ಶಿರೋಳ, ವಿಜಯನಗರ

ಮುಂದುವರಿಸುವೆ

ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಯೋಗ ಮಾಡಿದ್ದಕ್ಕೆ ಬಹಳ ಹೆಮ್ಮೆಯಾಗುತ್ತಿದೆ. ಮೂರು ವಾರಗಳಿಂದ ಅಭ್ಯಾಸ ಮಾಡಿದ್ದೆ. ನಮ್ಮ ತಂಡದೊಂದಿಗೆ ಭಾಗವಹಿಸಿದ್ದೆ. ಪ್ರಧಾನಿಯನ್ನು ದೂರದಿಂದಲೇ ನೋಡುತ್ತಾ ಅವರೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಅವಿಸ್ಮರಣೀಯ. ಪ್ರಧಾನಿಯು ನಮ್ಮ ಮೈಸೂರಿಗೆ ಬಂದು ಕಾರ್ಯಕ್ರಮವು ವಿಶ್ವದ ಗಮನಸೆಳೆಯುವಂತೆ ಮಾಡಿದ್ದಾರೆ. ಅದರಲ್ಲಿ ನಾನು ಪಾಲ್ಗೊಂಡಿದ್ದೆ ಎನ್ನುವುದು ಹೆಮ್ಮೆ.

ಶಶಿಕಲಾ ಸಿ.ಇ., ವಿದ್ಯಾರ್ಥಿನಿ, ಮಹಾರಾಜ ಕಾಲೇಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT