ನವೀಕೃತ ಸಂತ ಅಲ್ಫೋನ್‌ ದೇವಾಲಯ ಲೋಕಾರ್ಪಣೆ

7

ನವೀಕೃತ ಸಂತ ಅಲ್ಫೋನ್‌ ದೇವಾಲಯ ಲೋಕಾರ್ಪಣೆ

Published:
Updated:

ಚನ್ನರಾಯಪಟ್ಟಣ: ಪಟ್ಟಣದಲ್ಲಿ ಸುಮಾರು ₹ 60 ಲಕ್ಷ ವೆಚ್ಚದಲ್ಲಿ ನವೀಕರಣಗೊಳಿಸಿರುವ ಸಂತ ಆಲ್ಫೋನ್‌ ಚರ್ಚ್ ಅನ್ನು ಗುರುವಾರ ಲೋಕಾರ್ಪಣೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ದೇವಾಲಯದ 38ನೇ ವಾರ್ಷಿಕೋತ್ಸವ ಜರುಗಿತು.

ಅಲ್ಫೋನ್‌ ನಗರದ ಗೇಟ್‌ನಿಂದ ದೇವಾಲಯದವರೆಗೆ ರಸ್ತೆ ಎರಡು ಬದಿಯಲ್ಲಿ ತಳಿರು, ತೋರಣ ಕಟ್ಟಿ ಸಿಂಗರಿಸಿ ರಂಗೋಲಿ ಇಟ್ಟಿದ್ದು, ಚಿಕ್ಕಮಗಳೂರಿನ ಧರ್ಮಗುರು ಡಾ.ಟಿ.ಅಂತೋಣಿಸ್ವಾಮಿ ಅವರನ್ನು ಬರಮಾಡಿಕೊಳ್ಳಲಾಯಿತು.

ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು. ಧಾರ್ಮಿಕ ವಿಧಿ, ವಿಧಾನಗಳ ಮೂಲಕ ದೇವಾಲಯ ಉದ್ಘಾಟನೆ ಮಾಡಿದರು.

ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಎಚ್‌.ಡಿ.ರೇವಣ್ಣ ಅವರು,‘1969ರಲ್ಲಿ ಗೊರೂರು ಗ್ರಾಮದ ಸಮೀಪ ಅಣೆಕಟ್ಟೆ ನಿರ್ಮಿಸಿದಾಗ ಮುಳುಗಡೆಯಾದ ಪ್ರದೇಶದ ಜನರಿಗೆ ಪುನರ್ವಸತಿ ಕಲ್ಪಿಸಿದ ಪ್ರದೇಶವನ್ನೇ ಆಲ್ಫೋನ್ಸ್ ನಗರ ಎನ್ನಲಾಗುತ್ತದೆ’ ಎಂದರು.

‘ಜಿಲ್ಲೆಯಲ್ಲಿ ಇರುವ ಎಲ್ಲ ಚರ್ಚ್‌ಗಳಿಗೆ ಮೂಲಸೌಕರ್ಯ ಒದಗಿಸಲಾಗುವುದು. ಅಗತ್ಯವಿರುವ ಸವಲತ್ತುಗಳ ಬಗ್ಗೆ ಪ್ರಮುಖರು ತಿಳಿಸಿದರೆ ಮುಖ್ಯಮಂತ್ರಿ ಗಮನಕ್ಕೆ ತರಲಾಗುವುದು. ಹೊಳೆನರಸೀಪುರದ ಚರ್ಚ್ ಅಭಿವೃದ್ಧಿಗೆ ₹ 1ಕೋಟಿ ನೀಡಲಾಗುವುದು ಎಂದು  ಹೇಳಿದರು.

ಧರ್ಮಗುರು ಡಾ.ಟಿ. ಅಂತೋಣಿಸ್ವಾಮಿ ಅವರು, ‘ಭಕ್ತಿ ಮಾರ್ಗದಲ್ಲಿ ನಡೆದಾಗ ಸಮಾಜದಲ್ಲಿ ಶಾಂತಿ, ನೆಮ್ಮದಿ ಲಭಿಸುತ್ತದೆ. ಸಮಾಜದ ಒಳಿತಿಗಾಗಿ ಎಲ್ಲರು ದುಡಿಯಬೇಕು’ ಎಂದು ನುಡಿದರು.
ವಿಧಾನಪರಿಷತ್ತಿನ ಸದಸ್ಯ ಎಂ.ಎ.ಗೋಪಾಲಸ್ವಾಮಿ ಅವರು, ಜಿಲ್ಲಾ ಪಂಚಾಯಿತಿ ಸದಸ್ಯೆ ಭವಾನಿ ರೇವಣ್ಣ, ಧರ್ಮಗುರುಗಳಾದ ಜಾರ್ಜ್‌ ಡಿ ಸೋಜ, ಶಾಂತರಾಜು ಮಾತನಾಡಿದರು. ಪ್ಯಾಟ್ರಿಕ್‌ ಜೋಹನೆಸ್‌ರಾವ್‌, ಡೇವಿಡ್‌ ಪ್ರಕಾಶ್‌, ಎಚ್‌ಡಿಸಿಸಿ ಬ್ಯಾಂಕ್‌ ನಿರ್ದೇಶಕ ಪುಟ್ಟಸ್ವಾಮಿಗೌಡ, ಗ್ರಾಮಪಂಚಾಯಿತಿ ಅಧ್ಯಕ್ಷೆ ಸಾವಿತ್ರಮ್ಮ, ರಾಜಣ್ಣ, ನಂಜುಂಡಪ್ಪ, ದಿನೇಶ್‌, ಗಂಗಾಧರ್‌ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !