ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಅಡ್ಡಂಡ ಕಾರ್ಯಪ್ಪ ಪರ, ವಿರೋಧ ಪ್ರತಿಭಟನೆ

Last Updated 28 ಡಿಸೆಂಬರ್ 2021, 7:09 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ರಂಗಾಯಣದ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ ಅವರ ಪರ ಹಾಗೂ ವಿರೋಧ ಪ್ರತಿಭಟನೆಗಳು ಮಂಗಳವಾರ ನಗರದಲ್ಲಿ ನಡೆಯಿತು.

ಕೊಡವ ಸಮಾಜ, ಮೈಸೂರು ರಕ್ಷಣಾ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಳಗದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಅಡ್ಡಂಡ ಕಾರ್ಯಪ್ಪ ಪರ ಪ್ರತಿಭಟನೆ ನಡೆಸಿದರು. ಪೃಗತಿಪರರು ಎಂದು ಕರೆಸಿಕೊಳ್ಳುವ ಕೆಲವರು ಕಾರ್ಯಪ್ಪ ಅವರಿಗೆ ತೊಂದರೆ ಕೊಡುತ್ತಿದ್ದಾರೆ‌. ರಂಗಾಯಣದ ಆವರಣದಲ್ಲಿ ನಿತ್ಯ ಪ್ರತಿಭಟನೆ ನಡೆಸುವ ಮೂಲಕ ಕಲಾ ಚಟುವಟಿಕೆಗಳಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ಪ್ರತಿಭಟನಾನಿರತರು ಆರೋಪಿಸಿದರು.

ರಂಗಾಯಣ ಉಳಿಸಿ ಹೋರಾಟ ಸಮಿತಿ ನೇತೃತ್ವದಲ್ಲಿ ಹೋರಾಟಗಾರರು ಕುಕ್ಕರಹಳ್ಳಿ ಕೆರೆಯಿಂದ ರಂಗಾಯಣದವರೆಗೂ ಅಡ್ಡಂಡ ಕಾರ್ಯಪ್ಪ ವಜಾಗೆ ಆಗ್ರಹಿಸಿ ಪ್ರತಿಭಟನ ಜಾಥಾ ನಡೆಸಿದರು.

ರಂಗಾಯಣದ ಆವರಣದಲ್ಲಿ ಕಳೆದ 8 ದಿನಗಳಿಂದ ನಡೆಸುತ್ತಿರುವ ಪ್ರತಿಭಟನೆಯನ್ನು ನಿಲ್ಲಿಸಿ ಬೇರೆ ಕಡೆ ಪ್ರತಿಭಟನೆ ಮಾಡಬೇಕು ಎಂದು ಪೊಲೀಸರು ಮಾಡಿರುವ ಮನವಿಯನ್ನು ಪ್ರತಿಭಟನಕಾರರು ತಿರಸ್ಕರಿಸಿದ್ದಾರೆ.

ಮೈಸೂರು: ಅಡ್ಡಂಡ ಕಾರ್ಯಪ್ಪ ಪರ, ವಿರೋಧ ಪ್ರತಿಭಟನೆ
ಮೈಸೂರು: ಅಡ್ಡಂಡ ಕಾರ್ಯಪ್ಪ ಪರ, ವಿರೋಧ ಪ್ರತಿಭಟನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT