ಹುಲಿ ಪತ್ತೆ ಕಾರ್ಯಾಚರಣೆ ಮತ್ತೆ ಆರಂಭ

7

ಹುಲಿ ಪತ್ತೆ ಕಾರ್ಯಾಚರಣೆ ಮತ್ತೆ ಆರಂಭ

Published:
Updated:
Prajavani

ಹುಣಸೂರು: ತಾಲ್ಲೂಕಿನ ಕೆ.ಜಿ.ಹಬ್ಬನಕುಪ್ಪೆ ವ್ಯಾಪ್ತಿಯ ತರಗನ್‌ ಎಸ್ಟೇಟ್‌ ಸುತ್ತಮುತ್ತಲಿನಲ್ಲಿ ಹುಲಿ ಕಾಣಿಸಿಕೊಂಡ ಮಾಹಿತಿ ಆಧರಿಸಿ ಗುರುವಾರ ಅರಣ್ಯ ಇಲಾಖೆಯು ಮತ್ತೆ ಕಾರ್ಯಾಚರಣೆ ಆರಂಭಿಸಿದೆ.

ಕೆ.ಜಿ.ಹಬ್ಬನಕುಪ್ಪೆ ಗ್ರಾಮಕ್ಕೆ ಹೊಂದಿಕೊಂಡಿರುವ ಎಸ್ಟೇಟ್‌, ಯಜಮಾನ್‌ ಮಾದೇಗೌಡರ ತೆಂಗಿನ ತೋಟದಲ್ಲಿ ಸಾಕಾನೆ ಬಳಸಿ ಹುಲಿ ಪತ್ತೆಗೆ ಡಿಆರ್‌ಎಫ್‌ಒ ವೀರಭದ್ರಪ್ಪ ನೇತೃತ್ವದಲ್ಲಿ ಆರಂಭವಾಗಿದೆ. ಕಾರ್ಯಾಚರಣೆಗೆ ಸಾಕಾನೆಗಳಾದ ಅಭಿಮನ್ಯು, ಗಣೇಶನ ಬಳಸಲಾಗಿದೆ.

2018ರ ಆಗಸ್ಟ್‌ ತಿಂಗಳಲ್ಲಿ ಅರಣ್ಯ ಇಲಾಖೆಯು ಹುಲಿ ಸೆರೆಗೆ ಗಂಭೀರವಾಗಿ ಪ್ರಯತ್ನಿಸಿದ್ದರೂ, ಹುಲಿ ಪತ್ತೆ ಆಗಿರಲಿಲ್ಲ. ಕಾರ್ಯಾಚರಣೆಯಲ್ಲಿ ಕ್ಯಾಮೆರಾದಲ್ಲಿ ಹುಲಿಯೊಂದಿಗೆ ಮೂರು ಮರಿ ಇರುವುದು ಖಾತರಿಯಾಗಿತ್ತು.  ಹುಲಿ ಸೆರೆಗೆ ಬೋನು ಇಟ್ಟಿದ್ದರೂ ಹುಲಿ ಸೆರೆಹಿಡಿಯುವ ಯತ್ನ ಫಲಿಸಿರಲಿಲ್ಲ.

ಶೆಟ್ಟಹಳ್ಳಿ ಲಕ್ಕಪಟ್ಣಣ ಅರಣ್ಯದಂಚಿನಲ್ಲಿ ಬೇಟೆಗಾರರು ಹಾಕಿದ್ದ ಉರುಳಿಗೆ 5 ವರ್ಷದ ಗಂಡು ಹುಲಿ ಸಿಲುಕಿತ್ತು. ಅದನ್ನು ಇಲಾಖೆ ಸಂರಕ್ಷಿಸಿ ವನ್ಯಮೃಗ ಪುನರ್ವಸತಿ ಕೇಂದ್ರದಲ್ಲಿ ಬಿಟ್ಟು ಚಿಕಿತ್ಸೆ ನೀಡಲು ಕ್ರಮವಹಿಸಲಾಗಿತ್ತು.

ಜನವರಿ 1 ರಂದು ಮಾದೇಗೌಡರ ತೆಂಗಿನತೋಟದಲ್ಲಿ ಕುರಿಗಾಹಿ ಎದುರಿನಲ್ಲೇ ಹುಲಿ ದಾಳಿ ನಡೆಸಿದ್ದು, ಕುರಿ ಭೇಟೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಮತ್ತೆ ಕಾರ್ಯಾಚಾರಣೆಗೆ ಮುಂದಾಗಿದೆ. ಎ.ಸಿ.ಎಫ್‌. ಪ್ರಸನ್ನಕುಮಾರ್‌ ಅವರು ಸ್ಥಳಕ್ಕೆ ಭೇಟಿ ನೀಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !