ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗ್ರಾದ ಮಂಕಮೇಶ್ವರ್ ದೇವಾಲಯದಲ್ಲಿ ಇದೇ ಮೊದಲ ಬಾರಿಗೆ ಇಫ್ತಾರ್ ಕೂಟ

Last Updated 11 ಜೂನ್ 2018, 5:33 IST
ಅಕ್ಷರ ಗಾತ್ರ

ಲಖನೌ: ಆಗ್ರಾದಲ್ಲಿರುವ ಪ್ರಾಚೀನ ಮಂಕಮೇಶ್ವರ್ ದೇವಾಲಯ ಇದೇ ಮೊದಲ ಬಾರಿಗೆ ಮುಸ್ಲಿಂ ಬಾಂಧವರಿಗಾಗಿ ಭಾನುವಾರ ಇಫ್ತಾರ್ ಕೂಟ ಏರ್ಪಡಿಸಿ ಕೋಮು ಸೌಹಾರ್ದ ಮೆರೆದಿದೆ.

ಈ ವೇಳೆ ಮಾತನಾಡಿದ ಮಂಕಮೇಶ್ವರ್ ದೇವಾಲಯದ ಮಹಂತ್ ದಿವ್ಯಾ ಗಿರಿ ಅವರು, ‘ರಂಜಾನ್ ಒಂದು ಪವಿತ್ರ ತಿಂಗಳು. ಪ್ರತಿಯೊಬ್ಬರು ಎಲ್ಲಾ ಧಾರ್ಮಿಕ ಹಬ್ಬಗಳನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಬೇಕು’ ಎಂದು ಕರೆ ನೀಡಿದರು.‌

ರಂಜಾನ್‌ ಉಪವಾಸ ಕೈಗೊಂಡವರಿಗೆ ಸಹಾಯ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ. ಈ ಪುಣ್ಯ ಕಾರ್ಯದಲ್ಲಿ ಪ್ರತಿಯೊಬ್ಬರು ಜಾತಿಭೇದ ಮರೆತು ಭಾಗಿಯಾಗಬೇಕು ಎಂದು ಹೇಳಿದರು.

ರೋಜಾವನ್ನು ಮುಕ್ತಾಯಗೊಳಿಸುವ ವೇಳೆ ಕೈಗೊಂಡ ಈ ಒಳ್ಳೆಯ ಕಾರ್ಯ ಪ್ರಶಂಸನೀಯವಾದದು. ಇಂತಹ ಹಲವು ಕಾರ್ಯಗಳು ಹಿಂದು ಮತ್ತು ಮುಸ್ಲಿಂರ ನಡುವಿನ ಬಾಂಧವ್ಯವನ್ನು ವೃದ್ಧಿಗೊಳಿಸಲಿದೆ ಎಂದು ಇಮಾಮ್ ಅಬ್ದುಲ್ ಮನ್ನಾನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT