ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುರಸ್ತಿಯಾಗದ ಸೇತುವೆ: ಸಂಚಾರಕ್ಕೆ ಅಡ್ಡಿ

ಮೈಸೂರಿನತ್ತ ತೆರಳುವ ಪ್ರಯಾಣಿಕರ ಪರದಾಟ: ಕ್ರಮಕ್ಕೆ ಶಾಸಕ ಸೂಚನೆ
Last Updated 16 ಜೂನ್ 2018, 9:37 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಭಾರಿ ಮಳೆಯಿಂದ ತಿತಿಮತಿ ಬಳಿ ಕುಸಿದ ಹುಣಸೂರು– ವಿರಾಜಪೇಟೆ ಅಂತರರಾಜ್ಯ ಸಂಪರ್ಕ ರಸ್ತೆಯ ಸೇತುವೆಗೆ ಹಾನಿಯಾಗಿದ್ದು, ದುರಸ್ತಿಗೊಳ್ಳದ ಕಾರಣ ಮೈಸೂರು ಕಡೆಗೆ ತೆರಳುವ ಪ್ರಯಾಣಿಕರು ಶುಕ್ರವಾರ ತೊಂದರೆ ಅನುಭವಿಸಿದರು.

ವಿರಾಜಪೇಟೆ ಕಡೆಯಿಂದ ಮೈಸೂರಿಗೆ ಬಸ್ ಬರಬಹುದು ಎಂದು ಪ್ರಯಾಣಿಕರು ಗೋಣಿಕೊಪ್ಪಲು ಬಸ್ ನಿಲ್ದಾಣದಲ್ಲಿ ಕಾದು ನಿಂತಿದ್ದರು. ಬಳಿಕ ಮೈಸೂರಿಗೆ ತೆರಳುವ ಬಸ್‌ಗಳು ಅಮ್ಮತ್ತಿ ಸಿದ್ದಾಪುರ ಮಾರ್ಗವಾಗಿ ತೆರಳುತ್ತಿವೆ ಎಂದು ತಿಳಿದು ಪ್ರಯಾಣಿಕರು ಸಿದ್ದಾಪುರದತ್ತ ಪಯಣ ಬೆಳೆಸಿದರು.

ಮೈಸೂರು, ಗೋಣಿಕೊಪ್ಪಲು, ವಿರಾಜಪೇಟೆ, ಕಣ್ಣೂರು, ತಲಚೇರಿಗೆ ತೆರಳುವ ಬಸ್‌ಗಳು ತಿತಿಮತಿ ಮಾರ್ಗವಾಗಿ ಚಲಿಸಬೇಕಿತ್ತು. ಆದರೆ ತಿತಿಮತಿ ಬಳಿ ನೂತನವಾಗಿ ನಿರ್ಮಿಸುತ್ತಿರುವ ಸೇತುವೆ ಕುಸಿದು ಬಿದ್ದ ಪರಿಣಾಮ ಗುರುವಾರ ವಾಹನ ಸಂಚಾರ ಸ್ಥಗಿತಗೊಂಡಿದೆ. ಇದೀಗ ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳು ಪಿರಿಯಾಪಟ್ಟಣ, ಮಾಲ್ದಾರೆ, ಸಿದ್ದಾಪುರ ಅಮ್ಮತ್ತಿ ಮಾರ್ಗದಲ್ಲಿ ಚಲಿಸುತ್ತಿರುವುದರಿಂದ ಪೊನ್ನಂಪೇಟೆ, ಗೋಣಿಕೊಪ್ಪಲಿನ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿದೆ.

ಸ್ಥಳಕ್ಕೆ ಗುರುವಾರ ಭೇಟಿ ನೀಡಿದ್ದ ಶಾಸಕ ಕೆ.ಜಿ.ಬೋಪಯ್ಯ, ‘ಲಾರಿಗಳನ್ನು ಹೊರತುಪಡಿಸಿ, ಬಸ್ ಹಾಗೂ ಇತರೆ ಲಘು ವಾಹನಗಳು ಸಂಚರಿಸುವುದಕ್ಕಾದರೂ ಅವ ಕಾಶ ಮಾಡಿ’ ಎಂದು ಜಿಲ್ಲಾ ಲೋಕೋಪಯೋಗಿ ಇಲಾಖೆ ಮುಖ್ಯ ಎಂಜಿನಿಯರ್ ಅವರಿಗೆ ಸೂಚಿಸಿದರು.

ಕುಸಿದ ಸೇತುವೆಯನ್ನು ದುರಸ್ತಿಪ ಡಿಸುವ ಕಾರ್ಯಭರದಿಂದ ಸಾಗಿದೆ. ಆದರೆ, ಸೇತುವೆ ಬಳಿಯ ತೊರೆಯಲ್ಲಿ ಭಾರಿ ನೀರು ಸಂಗ್ರಹವಾಗಿರುವುದರಿಂದ ಸೇತುವೆ ಮತ್ತೆ ಕುಸಿಯುವ ಭೀತಿ ಎದುರಾಗಿದೆ. ಶುಕ್ರವಾರ ಸಂಜೆ ಮಳೆ ಬಿದ್ದ ಪರಿಣಾಮ ಸೇತುವೆ ಮೇಲೆ ಹಾಕಿದ್ದ ಜಲ್ಲಿಕಲ್ಲು ಹಾಗೂ ಮಣ್ಣು ಕೊಚ್ಚಿಹೋಯಿತು. ಕಾಮಗಾರಿ ನಿರೀಕ್ಷಿಸಿದಂತೆ ನಡೆಯುತ್ತಿಲ್ಲ ಎಂದು ಅಧಿಕಾರಿಗಳು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT