ಪೊಲೀಸ್‌ ದಾಳಿ ವೇಳೆ ಆಘಾತ: ಸಾವು

7

ಪೊಲೀಸ್‌ ದಾಳಿ ವೇಳೆ ಆಘಾತ: ಸಾವು

Published:
Updated:

ಮೈಸೂರು: ಜೂಜಾಟ ನಡೆಯುತ್ತಿದ್ದ ಸ್ಥಳಕ್ಕೆ ಪೊಲೀಸರು ದಾಳಿ ನಡೆಸಿದ ವೇಳೆ ವ್ಯಕ್ತಿಯೊಬ್ಬರು ಆಘಾತಗೊಂಡು ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಮೈಸೂರಿನ ಮಂಡಿ ಮೊಹಲ್ಲಾ ನಿವಾಸಿ, ವೃತ್ತಿಯಲ್ಲಿ ಟಿ.ವಿ ಮೆಕ್ಯಾನಿಕ್ ಆಗಿರುವ ಸಿರಾಜುದ್ದೀನ್ (41) ಮೃತಪಟ್ಟವರು. ಸುನ್ನಿ ಚೌಕದ ಬಳಿಯ ಉದ್ಯಾನದಲ್ಲಿ ಜೂಜಾಡುತ್ತಿದ್ದ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಪೊಲೀಸರು ಗುರುವಾರ ಸಂಜೆ ದಾಳಿ ನಡೆಸಿದ್ದರು.

ಈ ವೇಳೆ ಸ್ಥಳದಲ್ಲಿ ಎಂಟು ಮಂದಿ ಜೂಜಾಟದಲ್ಲಿ ತೊಡಗಿದ್ದರು. ಅಘಾತಗೊಂಡು ಕುಸಿದು ಬಿದ್ದ ಸಿರಾಜುದ್ದೀನ್‌ ಅವರನ್ನು ಪೊಲೀಸರು ತಕ್ಷಣ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಮಾರ್ಗ ಮಧ್ಯೆ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !