ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ಚಳವಳಿ ರೂಪಿಸಿದ್ದ ಮಾಲತಿ

ಮೈಸೂರಿನ ರಂಗಾಯಣದಲ್ಲಿ ‘ಗ್ರೀಷ್ಮ ರಂಗೋತ್ಸವ 2019’ ಆರಂಭ
Last Updated 20 ಮೇ 2019, 10:11 IST
ಅಕ್ಷರ ಗಾತ್ರ

ಮೈಸೂರು: ಸಾಹಿತ್ಯದ ವಿದ್ಯಾರ್ಥಿ ಯಾಗಿದ್ದ ಮಾಲತಿ ರಂಗಭೂಮಿಯನ್ನು ಅಪ್ಪಿಕೊಂಡರು. ಹಾಗೆಯೇ, ಬರಹಗಾರ್ತಿ, ನಿರ್ದೇಶಕಿಯಾಗಿಯೂ ಉತ್ತಮ ನಾಟಕಗಳನ್ನು ನಿರ್ದೇಶಿಸಿದರು ಎಂದು ಹಿರಿಯ ರಂಗಕರ್ಮಿ ಪ್ರೊ.ಎಚ್.ಎಸ್‌.ಉಮೇಶ್‌ ಹೇಳಿದರು.

ರಂಗಾಯಣದ ವತಿಯಿಂದ ಭಾನುವಾರ ನಡೆದ ಎಸ್‌.ಮಾಲತಿ ಅವರ ಸ್ಮರಣಾರ್ಥ ‘ಗ್ರೀಷ್ಮ ರಂಗೋತ್ಸವ 2019’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿಗೂ ಮಹಿಳಾ ಬರಹಗಾರ್ತಿಯರನ್ನು ನಮ್ಮ ಸಮಾಜಪ್ರೋತ್ಸಾಹಿಸುತ್ತಿಲ್ಲ. ಇದು ಶೋಚನೀಯ ಸಂಗತಿ. ಆದರೂ, 70ರ ದಶಕದ ಕಾಲದಲ್ಲಿ ಮಾಲತಿ, ರಂಗಭೂಮಿಯ ಮೊದಲ ನಾಟಕ ನಿರ್ದೇಶಕಿಯಾಗಿ ಕೆಲಸ ಮಾಡಿರುವುದು ಹೆಮ್ಮೆಯ ವಿಷಯ ಎಂದು ಶ್ಲಾಘಿಸಿದರು.

‘ರಾಮಾಯಣವನ್ನು ಸೀತಾ ರಾಮಾಯಣವಾಗಿ ಮಾಲತಿ ನೋಡಿ ದರು. ಹಾಗೆಯೇ, ಅವರು ಕಲೆಗೆ ಹೆಚ್ಚುಆದ್ಯತೆ ನೀಡಿದರು. ನಾವು ರಂಗಾಯಣಕ್ಕೆ ಬರಲು ಮಾಲತಿ ಯವರೇ ಸ್ಫೂರ್ತಿ’ ಎಂದು ಹೇಳಿದರು.

ರಂಗ ನಿರ್ದೇಶಕಿ ಕೆ.ಆರ್‌.ಸುಮತಿ ಮಾತನಾಡಿ, ಹವ್ಯಾಸಿ ನಾಟಕಗಳನ್ನು ಮಾಡುತ್ತಲೇ ದೊಡ್ಡ ಅರಿವನ್ನು ಮಾಲತಿ ಮೂಡಿಸಿದರು. ಹಿಂದೆ ನಾಟಕವೆಂದರೆ ಹೆಣ್ಣು ಮಕ್ಕಳನ್ನು ಕಳುಹಿಸಲು ಹಿಂಜರಿಯುತ್ತಿದ್ದರು. ಆದರೂ ಅದನ್ನೆಲ್ಲ ಬದಿಗೊತ್ತಿ ರಂಗಭೂಮಿಯನ್ನು ಆರಿಸಿ ಕೊಂಡರು ಎಂದರು.

‘ಟಿ.ವಿ ಮಾಧ್ಯಮಗಳಿಂದ ರಂಗ ಭೂಮಿಗೆಆತಂಕವಿದೆ ಎಂದು ಹೇಳಲಾಗುತ್ತಿದ್ದರೂ ಜನರು ಬರುತ್ತಿದ್ದಾರೆ. ಅವರಿಗೆ ನಮ್ಮಿಂದ ಮೌಲ್ಯಯುತವಾದ ನಾಟಕವನ್ನು ನೀಡಬೇಕು ಎನ್ನುವುದು ನಮ್ಮ ಅಭಿಲಾಷೆ. ಹಾಗೆಯೇ, ನಟನೆಯನ್ನು ನಾವು ದೊಡ್ಡದೆಂದುಭಾವಿಸಿದ್ದೇವೆ. ಅದು ತಪ್ಪು. ರಂಗಭೂಮಿ ದೊಡ್ಡ ಸಮುದ್ರವಿದ್ದಂತೆ. ಅದರಲ್ಲಿ ನಟನೆ ಒಂದು ಭಾಗವಷ್ಟೇ’ ಎಂದು ವಿವರಿಸಿದರು.

ತುಳಿತಕ್ಕೊಳಗಾದವರ ಸುಧಾರಣೆ ಮಾಡಲು ರಂಗಭೂಮಿಯನ್ನು ಮಾಧ್ಯಮವನ್ನಾಗಿ ಮಾಲತಿ ಬಳಸಿ ಕೊಂಡಿದ್ದರು. ರಂಗಭೂಮಿ ಮೂಲಕ ಚಳವಳಿ ಆರಂಭಿಸಿದರು ಎಂದರು.

ರಂಗಾಯಣದ ಜಂಟಿ ನಿರ್ದೇಶಕ ವಿ.ಎನ್‌.ಮಲ್ಲಿಕಾರ್ಜುನಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT