ಮಂಗಳವಾರ, ಅಕ್ಟೋಬರ್ 27, 2020
28 °C

ದಸರಾ ಹಿನ್ನೆಲೆ: ಮೈಸೂರಿಗೆ ವಿವಿಧೆಡೆಯಿಂದ ವಿಶೇಷ ರೈಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ದಸರಾ, ದೀಪಾವಳಿ ಹಾಗೂ ದುರ್ಗಾ ಪೂಜೆ ಅಂಗವಾಗಿ ನೈರುತ್ಯ ರೈಲ್ವೆಯು ಮೈಸೂರಿನಿಂದ ವಿವಿಧ ಭಾಗಗಳಿಗೆ ಅ.20 ರಿಂದ ನವೆಂಬರ್‌ 30ರ ವರೆಗೆ ವಿಶೇಷ ರೈಲು ಓಡಿಸಲು ನಿರ್ಧರಿಸಿದೆ.

ರೈಲು ಸಂಖ್ಯೆ 07301 ಅ.21 ರಿಂದ ಡಿ.1ರ ವರೆಗೆ ನಿತ್ಯ ಮೈಸೂರಿನಿಂದ ಧಾರವಾಡಕ್ಕೆ ಸಂಚರಿಸಲಿದೆ. ರೈಲು ಸಂಖ್ಯೆ 07302 ಅ.20 ರಿಂದ ನ.30ರ ವರೆಗೆ ನಿತ್ಯ ಧಾರವಾಡದಿಂದ ಮೈಸೂರಿಗೆ ಸಂಚರಿಸಲಿದೆ.

ರೈಲು ಸಂಖ್ಯೆ 06229 ಮಂಗಳವಾರ ಮತ್ತು ಗುರುವಾರ ಮೈಸೂರಿನಿಂದ ವಾರಾಣಸಿಗೆ ಹಾಗೂ ರೈಲು ಸಂಖ್ಯೆ 06230 ಗುರುವಾರ ಮತ್ತು ಶನಿವಾರ ವಾರಾಣಸಿಯಿಂದ ಮೈಸೂರಿಗೆ ಸಂಚರಿಸಲಿದೆ.

ರೈಲು ಸಂಖ್ಯೆ 06209 ಶುಕ್ರವಾರ ಮತ್ತು ಭಾನುವಾರ ಅಜ್ಮೇರ್‌ನಿಂದ ಮೈಸೂರಿಗೆ ಹಾಗೂ ರೈಲು ಸಂಖ್ಯೆ 06210 ಮಂಗಳವಾರ ಮತ್ತು ಗುರುವಾರ ಮೈಸೂರಿನಿಂದ ಅಜ್ಮೇರ್‌ಗೆ ಸಂಚರಿಸಲಿದೆ.

ರೈಲು ಸಂಖ್ಯೆ 02785 ಪ್ರತಿ ದಿನ ಕಾಚಿಗುಡದಿಂದ ಮೈಸೂರಿಗೆ ಹಾಗೂ ರೈಲು ಸಂಖ್ಯೆ 02786 ಪ್ರತಿ ದಿನ ಮೈಸೂರಿನಿಂದ ಕಾಚಿಗುಡಕ್ಕೆ ಸಂಚರಿಸಲಿದೆ.

ರೈಲು ಸಂಖ್ಯೆ 02577 ಮಂಗಳವಾರ ದರ್ಭಾಂಗದಿಂದ ಮೈಸೂರಿಗೆ ಹಾಗೂ ರೈಲು ಸಂಖ್ಯೆ 02578 ಶನಿವಾರದಂದು ಮೈಸೂರಿನಿಂದ ದರ್ಭಾಂಗಕ್ಕೆ ಸಂಚರಿಸಲಿದೆ.

ಮುಂದಿನ ದಿನಗಳಲ್ಲಿ ಹಬ್ಬಗಳು ಬರುವುದರಿಂದ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಲಾಗಿದೆ. ಹಬ್ಬದ ವಿಶೇಷ ರೈಲುಗಳು ನ.30ರ ವರೆಗೆ ಮಾತ್ರಸೇವೆ ನೀಡಲಿವೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು