ಶನಿವಾರ, ನವೆಂಬರ್ 23, 2019
18 °C

ಮದುವೆಗೆ ಒತ್ತಾಯ: ಯುವಕ ಆತ್ಮಹತ್ಯೆ

Published:
Updated:

ವರುಣಾ: ತನಗೆ ಇಷ್ಟವಿಲ್ಲದಿದ್ದರೂ ಮನೆಯವರು ಮದುವೆ ಮಾಡಲು ಮುಂದಾಗಿದ್ದರಿಂದ ಬೇಸತ್ತು, ಸಮೀಪದ ಪಿಲ್ಲಹಳ್ಳಿ ಗ್ರಾಮದ ಶಿವರಾಜ್ (26) ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶಿವರಾಜ್‌ ಅವರಿಗೆ ಮುಂದಿನ ವಾರ ನಿಶ್ಚಿತಾರ್ಥ ಮಾಡಲು ತಯಾರಿ ನಡೆಸಲಾಗಿತ್ತು. ಗುರುವಾರ ರಾತ್ರಿ 7 ಗಂಟೆ ಸುಮಾರಿಗೆ ಅಣ್ಣನ ಮಕ್ಕಳಿಗೆ ಬಿಸ್ಕತ್ತು ತಂದುಕೊಟ್ಟ ಅವರು ಮನೆಯಿಂದ ಹೊರಗೆ ಹೋಗಿದ್ದರು. ರಾತ್ರಿ ಹತ್ತು ಗಂಟೆಯಾದರೂ ಮನೆಗೆ ಬಂದಿರಲಿಲ್ಲ. ಆತಂಕಗೊಂಡ ಕುಟುಂಬಸ್ಥರು ಹುಡುಕಾಟ ನಡೆಸುತ್ತಿದ್ದಾಗ, ಗ್ರಾಮದ ಹೊರಗಡೆ‌ ಇರುವ ಆಲದ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ ಎಂದು ವರುಣಾ ಪೊಲೀಸ್ ಠಾಣೆ ಎಸ್‌ಐ ಲೋಲಾಕ್ಷಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)