ಗುರುವಾರ , ಜುಲೈ 16, 2020
26 °C
ಕಾಮಗಾರಿ ವೀಕ್ಷಿಸಿದ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ

ಸುತ್ತೂರು ಏತ ನೀರಾವರಿ; ಆಗಸ್ಟ್‌ಗೆ ಪೂರ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ನಂಜನಗೂಡು ತಾಲ್ಲೂಕಿನ ಸುತ್ತೂರು ಏತ ನೀರಾವರಿ ಯೋಜನೆಯನ್ನು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಶುಕ್ರವಾರ ಪ‍ರಿಶೀಲನೆ ನಡೆಸಿದರು. ಆಗಸ್ಟ್ ವೇಳೆಗೆ ಕಾಮಗಾರಿ ಮುಗಿಯಲಿದೆ ಎಂದು ತಿಳಿಸಿದರು.

ವಿವಿಧ ಕಾರಣಗಳಿಗಾಗಿ ಯೋಜನೆ ಪೂರ್ಣಗೊಳ್ಳುವುದು ವಿಳಂಬವಾಗಿದೆ ಎಂದ ಅವರು, ಆಗಸ್ಟ್ ವೇಳೆಗೆ ನಂಜನಗೂಡು, ಚಾಮರಾಜನಗರ ಹಾಗೂ ಯಳಂದೂರು ತಾಲ್ಲೂಕಿನ ಕೆರೆಗಳಿಗೆ ನೀರು ಹರಿಯಲಿದೆ ಎಂದು ಹೇಳಿದರು.

ನಂಜನಗೂಡು, ಚಾಮರಾಜನಗರ ಹಾಗೂ ಯಳಂದೂರು ತಾಲ್ಲೂಕಿನ 24 ಕೆರೆಗಳಿಗೆ ನೀರು ತುಂಬಿಸುವ ಬಹು ನಿರೀಕ್ಷಿತ ಸುತ್ತೂರು ಏತ ನೀರಾವರಿ ಯೋಜನೆಯು ₹ 233 ಕೋಟಿ ಮೊತ್ತದ್ದು. ಇದರಿಂದ ನಂಜನಗೂಡಿನ 2, ಚಾಮರಾಜನಗರದ 21 ಹಾಗೂ ಯಳಂದೂರಿನ 1 ಕೆರೆಗೆ ನೀರು ತುಂಬಿಸುವ ಗುರಿ ಹಾಕಿಕೊಳ್ಳಲಾಗಿದೆ.

ಮೊದಲ ಹಂತದಲ್ಲಿ 11, ಇನ್ನುಳಿದ ಕೆರೆಗಳಿಗೆ 2ನೇ ಹಂತದಲ್ಲಿ ನೀರು ತುಂಬಿಸಲಾಗುತ್ತದೆ. ಇದರಿಂದ ಅಂತರ್ಜಲ ಅಭಿವೃದ್ಧಿಯಾಗಿ ಆ ಭಾಗದ ಕೊಳವೆಬಾವಿಗಳಲ್ಲಿ ನೀರು ಹೆಚ್ಚುತ್ತದೆ. ಇದರಿಂದ 57 ಗ್ರಾಮಗಳ ರೈತರಿಗೆ ಅನುಕೂಲವಾಗಲಿದೆ.

ಕೆರೆಗಳು ಯಾವುವು?

ನಂಜನಗೂಡಿನ ಕುಂಕೆರೆ, ಚಿಕ್ಕಹೊಮ್ಮಕೆರೆ, ಚಾಮರಾಜನಗರದ ಜನ್ನೂರು ಕೆರೆ, ಬಾಗಲಿ, ಉಮ್ಮತ್ತೂರು, ಯಡಿಯೂರು ಅಡ್ಡಹಳ್ಳ, ದೊಡ್ಡರಾಯಪೇಟೆ, ಹೊಮ್ಮ, ಕಣ್ಣೇಗಾಲ, ಕೋಡಿಮೊಳೆ, ಅಂಬ್ಲೆ, ದೊಡ್ಡಕೆರೆ, ಚಿಕ್ಕಕೆರೆ, ಸಿಂಡಿಗೆರೆ, ಮರಗದಕೆರೆ, ಬಂಡಿಗೆರೆ, ನಗರದ ಕೆರೆ, ಸರಗೂರು ಮೋಳೆ, ಹೆಬ್ಬಳ್ಳ, ಮಲ್ಲದೇವನಹಳ್ಳಿ, ಪುಟ್ಟನಪುರ, ಹೊಂಡರಬಾಳು, ನಾಗವಳ್ಳಿ, ಕಾಗಲವಾಡಿ ಕೆರೆಗಳು ಈ ಯೋಜನೆ ವ್ಯಾಪ್ತಿಯಲ್ಲಿವೆ ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ಮಾಹಿತಿ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು