ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಲಕಾಡಿನಲ್ಲಿ ಭಂಡಾರಸಮ್ಮ ಹಬ್ಬಕ್ಕೆ ಚಾಲನೆ

Last Updated 18 ಫೆಬ್ರುವರಿ 2020, 10:53 IST
ಅಕ್ಷರ ಗಾತ್ರ

ತಲಕಾಡು: ಗ್ರಾಮದ ಭಂಡಾರಸಮ್ಮ ಹಬ್ಬಕ್ಕೆ ಸೋಮವಾರ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಚಾಲನೆ ನೀಡಲಾಯಿತು.

ಒಟ್ಟು 4 ದಿನಗಳ ಇಲ್ಲಿ ವಿವಿಧ ಉತ್ಸವಗಳು ಜರುಗಲಿವೆ. ಫೆ. 18ರಂದು ಬಂಡಿ ಉತ್ಸವ ಮತ್ತು ಮಡೆ ಉತ್ಸವ, 19ರಂದು ಉತ್ಸವಮೂರ್ತಿಗೆ ಹುಲಿ ವಾಹನೋತ್ಸವ (ಕನಕರಡಿ ಉತ್ಸವ), 20ರಂದು ಬೆಳಿಗ್ಗೆ ಅಗ್ಗಿಷ್ಟಿಕೆ ಉತ್ಸವ, ಸಂಜೆ ಕಾವೇರಿ ನದಿಯಲ್ಲಿ ಗಂಗಾಪೂಜೆ ಮತ್ತು ಕೇಲು ಉತ್ಸವ, 21ರಂದು ಹಿಂಡಿಗುಳಿಕುಣಿತ ನಡೆಯಲಿದೆ‌ ಎಂದು ಅರ್ಚಕ ಬಸವರಾಜಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ತಲಕಾಡಿನ ಮುಖ್ಯ ವೃತ್ತದಲ್ಲಿರುವ ಭಂಡಾರಸಮ್ಮ ದೇಗುಲವನ್ನು ಸೋಮವಾರ ಸ್ವಚ್ಛಗೊಳಿಸಲಾಯಿತು. ತಳಿರು ತೋರಣಗಳಿಂದ ಸಿಂಗರಿಸಲಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT