ಸೋಮವಾರ, ನವೆಂಬರ್ 30, 2020
21 °C

ಪ್ರಯಾಣಿಕರ ಹಣವನ್ನು ಹಿಂದಿರುಗಿಸಿದ ನಿರ್ವಾಹಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಲಕಾಡು: ಸರ್ಕಾರಿ ಬಸ್‌ನಲ್ಲಿ ಹಣ ಬಿಟ್ಟುಹೋಗಿದ್ದ ಮಹಿಳೆಗೆ ಅದನ್ನು ಹಿಂತಿರುಗಿಸಿದ ನಿರ್ವಾಹಕ ರವಿ ಅವರ ಕೆಲಸ ಮೆಚ್ಚುಗೆಗೆ ಪಾತ್ರವಾಗಿದೆ.

ತಲಕಾಡಿನಿಂದ ಕೊಳ್ಳೇಗಾಲಕ್ಕೆ ಹೋಗುವ ಮಧ್ಯಾಹ್ನದ 2ಕ್ಕೆ ಬಣವೆ ಗ್ರಾಮದ ನಿವಾಸಿ ನಂಜಮಣಿ ಎಂಬುವರು ಬ್ಯಾಂಕಿನಿಂದ ಪಡೆದಿದ್ದ ₹17000 ಹಣವನ್ನು ಬಸ್ಸಿನಲ್ಲಿಯೇ ಮರೆತು ಹಣ ಬಿಟ್ಟು ಹೋಗಿದ್ದಾರೆ. ಪ್ರಯಾಣಿಕರಿಗೆ ಟಿಕೆಟ್ ಕೊಡುವ ಸಂದರ್ಭದಲ್ಲಿ ಮರೆತು ಬಿಟ್ಟು ಹೋಗಿದ್ದ ಚೀಲವನ್ನು ನೋಡಿದ ನಿರ್ವಾಹಕ ರವಿ ಅವರು, ಅದರಲ್ಲಿದ್ದ ಹಣ ಬ್ಯಾಂಕ್ ಪುಸ್ತಕ ವಿಳಾಸವನ್ನು ಪತ್ತೆ ಹಚ್ಚಿ ನಂಜಮಣಿ ಅವರಿಗೆ ಹಣವನ್ನು ವಾಪಸ್ ನೀಡಿದ್ದಾರೆ.

ರವಿ ಅವರ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದು, ನಂಜಮಣ್ಣಿ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.