ಶುಕ್ರವಾರ, ಸೆಪ್ಟೆಂಬರ್ 24, 2021
27 °C
ನಂಜನಗೂಡು ಪಟ್ಟಣದಲ್ಲಿ ಕಳ್ಳತನ– ಆತಂಕ

ಬಾಗಿಲು ಮುರಿದು ಸರ ದೋಚಿದ ಕಳ್ಳರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಂಜನಗೂಡು: ಪಟ್ಟಣದ ತಮ್ಮಡಗೇರಿ ಬಡಾವಣೆಯಲ್ಲಿ ಮಂಗಳವಾರ ತಡರಾತ್ರಿ ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಕಾವಲುಗಾರ ರವಿಕುಮಾರ್ ಅವರ ಮನೆಯ ಹಿತ್ತಲ ಬಾಗಿಲು ಮುರಿದು ಮನೆ ಪ್ರವೇಶಿಸಿದ ಕಳ್ಳರು 40 ಗ್ರಾಂ ತೂಕದ ₹ 1.2 ಲಕ್ಷ ಮೌಲ್ಯದ ಚಿನ್ನದ ಸರವನ್ನು ದೋಚಿ ಪರಾರಿಯಾಗಿದ್ದಾರೆ.

ರವಿಕುಮಾರ್ ಅವರು ರಾತ್ರಿ ಪಾಳಿ ಕೆಲಸಕ್ಕೆ ತೆರಳಿದ ವೇಳೆ ಇಬ್ಬರು ಕಳ್ಳರು ಈ ಕೃತ್ಯ ಎಸಗಿದ್ದಾರೆ. ಬಾಗಿಲು ಮುರಿಯುವ ಸದ್ದಿಗೆ ಎಚ್ಚರಗೊಂಡ ರವಿಕುಮಾರ್ ತಾಯಿ ನಾಗರತ್ನಮ್ಮ ಹಾಗೂ ಪತ್ನಿ ಕವಿತಾಕುಮಾರಿ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡಿದ್ದಾರೆ. ನಾಗರತ್ನಮ್ಮ ಅವರ ಚಿನ್ನದ ಸರ ಭಾಗಶಃ ತುಂಡಾಗಿ ಉಳಿದುಕೊಂಡಿದೆ.

ಸ್ಥಳಕ್ಕೆ ಬೆರಳಚ್ಚು ತಜ್ಞರು ಹಾಗೂ ಶ್ವಾನದಳದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ಸಿಪಿಐ ಶೇಖರ್ ತಿಳಿಸಿದ್ದಾರೆ.

ಕುರಿ ಕಳ್ಳನ ಬಂಧನ
ಮೈಸೂರು:
ಮೇಯಲು ಬಿಟ್ಟಿದ್ದ 5 ಕುರಿಗಳನ್ನು ಕಳವು ಮಾಡಿದ್ದ ಶಾಂತಿನಗರದ ಮಹದೇವಪುರ ರಸ್ತೆ ಬಳಿಯ ನಿವಾಸಿ ಸಯ್ಯದ್ ಅಕ್ಲಂ (26) ಎಂಬ ಆರೋಪಿಯನ್ನು ಎನ್.ಆರ್.ಠಾಣೆ ಪೊಲೀಸರು ಬಂಧಿಸಿದ್ದಾರೆ.

ರಾಜೀವನಗರದ ನಿವಾಸಿ ಮುನಾವರ್ ಪಾಷಾ ನಗರದ ಟಿಎಎಂ ವೃತ್ತದಲ್ಲಿ ಮಾಂಸದಂಗಡಿ ನಡೆಸುತ್ತಿದ್ದಾರೆ. ಇವರು ಮಂಗಳವಾರ ಹೊಳೆನರಸೀಪುರದ ಸಂತೆಯಲ್ಲಿ 5 ಕುರಿಗಳನ್ನು (₹ 45 ಸಾವಿರ ಮೌಲ್ಯ) ಖರೀದಿಸಿ ತಂದು, ತಮ್ಮ ಮನೆಯ ಬಳಿ ಮೇಯಲು ಬಿಟ್ಟಿದ್ದರು. ಈ ವೇಳೆ ಅಕ್ಲಂ ಜಾಣತನದಿಂದ ಕುರಿಗಳನ್ನು ಕಳ್ಳತನ ಮಾಡಿ ಆಟೊವೊಂದರಲ್ಲಿ ಹಾಕಿಕೊಂಡು ಪರಾರಿಯಾಗಿದ್ದ. ನಂತರ, ಪಾಷಾ ಅವರು ಮೇಯಲು ಬಿಟ್ಟ ಸ್ಥಳಕ್ಕೆ ಬಂದು ನೋಡಿದಾಗ ಕುರಿಗಳು ಕಳವಾಗಿರುವುದು ತಿಳಿದು ಬಂದಿದೆ. ಬಳಿಕ ಅವರು ಎನ್.ಆರ್.ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರ ಮರುದಿನವೇ ಕಳ್ಳನ ಪತ್ತೆಗೆ ಬಲೆ ಬೀಸಿದ ಎನ್.ಆರ್‌.ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.