ಬುಧವಾರ, ಜೂನ್ 16, 2021
28 °C

ಪಿಎಸ್‌ಐ ಮನೆಯಲ್ಲೇ ಕಳವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ರಾಜ್ಯ ಗುಪ್ತ ವಾರ್ತೆಯ (ಗುಪ್ತದಳದ) ಪಿಎಸ್‌ಐ ಮನೆಯಲ್ಲೇ ಚಿನ್ನಾಭರಣ, ₹ 20 ಸಾವಿರ ನಗದು ಕಳವಾಗಿದೆ.

ವಿಜಯನಗರ ನಾಲ್ಕನೇ ಹಂತದ ನಿವಾಸಿ ಬಸವರಾಜು ಎಂಬುವರ ಮನೆಯಲ್ಲಿಯೇ ಕಳ್ಳತನ ನಡೆದಿರುವುದು.

ಬಸವರಾಜು ಕುಟುಂಬ ಸಮೇತರಾಗಿ ಹೂಟಗಳ್ಳಿಯಲ್ಲಿರುವ ತಮ್ಮ ಮಾವನ ಮನೆಗೆ ಹೋಗಿದ್ದರು. ಅದೇ ದಿನ ರಾತ್ರಿ 9 ಗಂಟೆಗೆ ಮನೆಗೆ ಮರಳಿದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ.

ಮನೆಯ ಬಾಗಿಲ ಡೋರ್ ಲಾಕ್ ಮೀಟಿರುವ ಕಳ್ಳರು, ಒಳನುಗ್ಗಿ ರೂಮಿನ ವಾರ್ಡ್‌ರೋಬ್‌ಗಳಲ್ಲಿಟ್ಟಿದ್ದ 40 ಗ್ರಾಂ ಚಿನ್ನ, ₹ 20 ಸಾವಿರ ನಗದು ಕಳವು ಮಾಡಿದ್ದಾರೆ ಎಂದು ವಿಜಯನಗರ ಪೊಲೀಸರು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು