ಸೋಮವಾರ, ನವೆಂಬರ್ 18, 2019
24 °C

ಐಷಾರಾಮಿ ಕಾರಿನ ಲೋಗೊ ಕದ್ದ ಕಳ್ಳರು: ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯಾವಳಿ ಸೆರೆ

Published:
Updated:
Prajavani

ಮೈಸೂರು: ಕಾಂಗ್ರೆಸ್‌ ಮುಖಂಡ ಸಿ.ಎನ್‌.ಮಂಜೇಗೌಡ ಅವರ ಮಾಲೀಕತ್ವದ ಬಿಎಂಡಬ್ಲ್ಯೂ ಕಾರಿನ ಲೋಗೊವನ್ನು ಕಳ್ಳರು ಶನಿವಾರ ರಾತ್ರಿ ಕದ್ದೊಯ್ದಿದ್ದು, ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಶ್ರೀರಾಂಪುರ ಬಡಾವಣೆಯಲ್ಲಿನ ಮನೆ ಮುಂದೆ ಮಂಜೇಗೌಡ ಅವರು ಕಾರು ನಿಲ್ಲಿಸಿದ್ದರು. ಇಬ್ಬರು ಕಳ್ಳರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಕಳ್ಳತನ ಮಾಡಿದ್ದಾರೆ. ಭಾನುವಾರ ಬೆಳಿಗ್ಗೆ ಕಾರಿನಲ್ಲಿ ಲೋಗೊ ಇಲ್ಲದೇ ಇರುವುದನ್ನು ಗಮನಿಸಿದ ಮಂಜೇಗೌಡ ತಮ್ಮ ಮನೆಯ ಸಿಸಿಟಿವಿ ದೃಶ್ಯವನ್ನು ಪರಿಶೀಲಿಸಿದ್ದು, ಕದಿಯುತ್ತಿರುವ ದೃಶ್ಯ ಸಿಕ್ಕಿದೆ. ಕೂಡಲೇ ದೃಶ್ಯವನ್ನು ಸಿ.ಡಿ ಮಾಡಿಸಿ ಕುವೆಂಪುನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ದುಬಾರಿ ಲೋಗೊ: ಬಿಎಂಡಬ್ಲ್ಯೂ, ಮರ್ಸಿಡೆಸ್ ಬೆಂಜ್ ಮಾದರಿಯ ಐಷಾರಾಮಿ ಕಾರುಗಳ ಲೋಗೊಗಳ ಬೆಲೆ ತೀರಾ ಹೆಚ್ಚಿರುತ್ತದೆ. ₹ 3 ಸಾವಿರದಿಂದ ₹ 12 ಸಾವಿರದವರೆಗೂ ಬೆಲೆಬಾಳುತ್ತವೆ. ಹಾಗಾಗಿ, ಈ ಲೋಗೊಗಳನ್ನು ಕದಿಯುವ ಕಳ್ಳರು ಕಡಿಮೆ ಬೆಲೆಗೆ ಕಾಳಸಂತೆಯಲ್ಲಿ ಮಾರುತ್ತಾರೆ.

ಮಂಜೇಗೌಡ ಅವರ ಕಾರಿನಿಂದ ಮಾರು ಬಾರಿ ಕಳ್ಳರು ಲೋಗೊ ಕದ್ದಿದ್ದಾರೆ. ಆದರೆ, ಮುಂಚೆ ಪೊಲೀಸ್ ದೂರನ್ನು ನೀಡಿರಲಿಲ್ಲ ಎಂದು ಮಂಜೇಗೌಡ ಹೇಳಿದರು.

ಪ್ರತಿಕ್ರಿಯಿಸಿ (+)