ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಮಾಣಿಕತೆ ಸಾಬೀತು ಪಡಿಸಲು ಡಿಕೆಶಿಗೆ ಅವಕಾಶ: ಡಾ.ಸುಧಾಕರ್

ತನಿಖೆಯ ಮುಂದುವರಿದ ಭಾಗ–ರಾಜಕೀಯ ಪ್ರೇರಿತ ಅಲ್ಲ: ಡಾ.ಸುಧಾಕರ್
Last Updated 6 ಅಕ್ಟೋಬರ್ 2020, 1:56 IST
ಅಕ್ಷರ ಗಾತ್ರ

ಮೈಸೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ನಿವಾಸದ ಮೇಲೆ ಈ ಹಿಂದೆ ಇಡಿ, ಐಟಿ ದಾಳಿ ನಡೆದಿದ್ದು, ತನಿಖೆಯ ಮುಂದುವರಿದ ಭಾಗವಾಗಿ ಈಗ ಸಿಬಿಐ ದಾಳಿ ನಡೆಸಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಸೋಮವಾರ ಇಲ್ಲಿ ತಿಳಿಸಿದರು.

ರಾಜಕೀಯ ಪ್ರೇರಿತ ದಾಳಿ ಎಂಬ ಕಾಂಗ್ರೆಸ್‌ ಆರೋಪಕ್ಕೆ ಪ್ರತಿಕ್ರಿಯಿಸಿ, ‘ರಾಜಕಾರಣಕ್ಕೂ ದಾಳಿಗೂ ಸಂಬಂಧ ಇಲ್ಲ. ರಾಜಕೀಯ ಹಸ್ತಕ್ಷೇಪದಲ್ಲಿ ಬಿಜೆಪಿ ನಂಬಿಕೆ ಇಟ್ಟುಕೊಂಡಿಲ್ಲ’ ಎಂದರು.

‘ಪಾರದರ್ಶಕವಾಗಿ ತನಿಖೆ ನಡೆಯಲಿದೆ. ತಮ್ಮ ಪ್ರಾಮಾಣಿಕತೆಯನ್ನು ಸಾಬೀತುಪಡಿಸಲು ಶಿವಕುಮಾರ್ ಅವರಿಗೆ ಸಿಕ್ಕಿರುವ ಅತ್ಯುತ್ತಮ ಅವಕಾಶ’ ಎಂದು ಹೇಳಿದರು.

ಸೋತರೂ ಸರ್ಕಾರ ಬಿದ್ದು ಹೋಗಲ್ಲ: ‘ಬಿಜೆಪಿ, 117 ಸ್ಥಾನಗಳನ್ನು ಸ್ವಂತ ಬಲದಿಂದ ಗೆದ್ದಿದೆ. ಮುಂದಿನ ಉಪಚುನಾವಣೆಯಲ್ಲಿ ಎರಡೂ ಕ್ಷೇತ್ರ ಗಳಲ್ಲಿ ಬಿಜೆಪಿ ಸೋತರೂ ಸರ್ಕಾರ ಬಿದ್ದು ಹೋಗುವುದಿಲ್ಲ. ಹೀಗಾಗಿ, ಉಪಚುನಾವಣೆಗೂ ಸಿಬಿಐ ದಾಳಿಗೂ ಸಂಬಂಧವಿಲ್ಲ. ಸಿಬಿಐ ಸ್ವಾಯತ್ತ
ಸಂಸ್ಥೆ. ರಾಜಕೀಯ ಬಣ್ಣ ಹಚ್ಚಿ ಜನರ ದಿಕ್ಕು ತಪ್ಪಿ ಸುವ ಕೆಲಸ ಮಾಡಬಾರದು. ಕಾಂಗ್ರೆಸ್‌ ಸುಮ್ಮನೇ ಆರೋಪ ಮಾಡುತ್ತಿದೆ’ ಎಂದು ಡಾ.ಸುಧಾಕರ್‌ ತಿಳಿಸಿದರು.

‘ಡಿ.ಕೆ. ಶಿವಕುಮಾರ್ ಅವ ರನ್ನು ಟಾರ್ಗೆಟ್ ಮಾಡಿದ್ದೇವೆ ಎನ್ನುವುದಾ ದರೆ, ಯುಪಿಎ ಸರ್ಕಾರದ ಅವಧಿಯಲ್ಲಿ, ಅಮಿತ್ ಶಾ ಅವರನ್ನು ಎರಡು ವರ್ಷ ಗುಜರಾತ್‍ನಿಂದ ಬಹಿಷ್ಕಾರ ಮಾಡಿದ್ದು, ಈಗಿನ ಆಂಧ್ರಪ್ರದೇಶದ ಸಿಎಂ ಸೇರಿ ಕಾಂಗ್ರೆಸ್ಸೇತರ ಪಕ್ಷದ ಮೇಲೆ ಸಿಬಿಐ ದಾಳಿ ನಡೆಸಿದ್ದು ರಾಜಕೀಯ ಪ್ರೇರಣೆಯೇ?’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT