ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿರಿಯಾಪಟ್ಟಣ: ಚೀನಾ ವಸ್ತು ಬಹಿಷ್ಕರಿಸಿದ ಟಿಬೆಟನ್ ನಿರಾಶ್ರಿತರು

2022ರ ಒಲಿಂಪಿಕ್ಸ್ ಆತಿಥ್ಯಕ್ಕೂ ವಿರೋಧ
Last Updated 1 ಅಕ್ಟೋಬರ್ 2020, 16:07 IST
ಅಕ್ಷರ ಗಾತ್ರ

ಪಿರಿಯಾಪಟ್ಟಣ: ತಾಲ್ಲೂಕಿನ ಬೈಲಕುಪ್ಪೆಯ ಟಿಬೆಟನ್ ನಿರಾಶ್ರಿತರ ಶಿಬಿರದಲ್ಲಿ ಚೀನಾ ವಸ್ತುಗಳನ್ನು ಬಹಿಷ್ಕರಿಸಿ ಸುಡುವ ಮೂಲಕ ಭಾರತದೊಂದಿಗೆ ಗಡಿತಂಟೆ ಮಾಡುತ್ತಿರುವುದನ್ನು ವಿರೋಧಿಸಿ ಮತ್ತು ಕೊರೊನಾ ಪ್ರಪಂಚದಾದ್ಯಂತ ಹರಡಲು ಕಾರಣವಾಗಿರುವುದನ್ನು ಗುರುವಾರ ಖಂಡಿಸಲಾಯಿತು.

ಟಿಬೆಟನ್ ಮಾರುಕಟ್ಟೆ ಪ್ರದೇಶದಲ್ಲಿ ನ್ಯಾಷನಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಟಿಬೆಟ್ ಸಂಘಟನೆ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಂಘಟನೆಯ ಮುಖಂಡರಾದ ಸೋನಂ ಮಾತನಾಡಿ, ‘ಚೀನಾ ವಸ್ತುಗಳನ್ನು ಬಹಿಷ್ಕರಿಸುವುದನ್ನು ಆನ್‌ಲೈನ್ ಆಂದೋಲನದ ಮೂಲಕ ಮತ್ತು ಅಂತರ ಕಾಯ್ದುಕೊಂಡು ಚೀನಾ ವಸ್ತುಗಳನ್ನು ಸುಟ್ಟು ಹಾಕುವ ಮೂಲಕ ನಮ್ಮ ವಿರೋಧವನ್ನು ದಾಖಲಿಸಲಾಗುತ್ತಿದೆ’ ಎಂದು ಹೇಳಿದರು.

‘ದೇಶದಲ್ಲಿ 5 ಪ್ರಮುಖ ಟಿಬೆಟನ್ ಎನ್‌ಜಿಒಗಳು ಈ ಆಂದೋಲನವನ್ನು ಚುರುಕುಗೊಳಿಸುವ ಕಾರ್ಯದಲ್ಲಿ ತೊಡಗಿವೆ. ಚೀನಾದಲ್ಲಿ 2022ರಲ್ಲಿ ಒಲಿಂಪಿಕ್ಸ್ ನಡೆಸುವುದನ್ನು ಸಹ ನಾವು ಪ್ರಬಲವಾಗಿ ವಿರೋಧಿಸುತ್ತಿದ್ದೇವೆ’ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತೆಂಜಿನ್ ಡೋಲ್ಮಾ, ಫೆಮಾ ಪುರ್ಬು, ನ್ಯಾಮ್ಗಲ್ ಸೆರಿಂಗ್, ಯಂಗ್ ಡೋಪ್ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT