ಸೋಮವಾರ, ಆಗಸ್ಟ್ 2, 2021
20 °C

ಹುಣಸೂರು: ನಾಗಮಂಗಲ ಗ್ರಾಮದ ಬಳಿ ಹುಲಿ ಪ್ರತ್ಯಕ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಣಸೂರು: ತಾಲ್ಲೂಕಿನ ನಾಗಮಂಗಲ ಗ್ರಾಮಕ್ಕೆ ಹೊಂದಿಕೊಂಡಿರುವ ಮಯತ್ತುರಾಯನ ಹೊಸಹಳ್ಳಿ ಮೀಸಲು ಅರಣ್ಯದಿಂದ ಹೊರ ಬಂದ ಹುಲಿಯೊಂದು ಕಾಣಿಸಿಕೊಂಡಿದೆ ಎಂದು ಸ್ಥಳೀಯ ನಿವಾಸಿ ದೇವರಾಜ್ ತಿಳಿಸಿದ್ದಾರೆ.

ಶೋಭಾ ಹರೀಶ್ ಅವರಿಗೆ ಸೇರಿದ ಹೊಲದಲ್ಲಿ ಉಳುಮೆ ಮಾಡಲು ತೆರಳಿದವರಿಗೆ ಜಮೀನಿಗೆ ಹೊಂದಿಕೊಂಡಿರುವ ಅರಣ್ಯದಂಚಿನಲ್ಲಿ ಹುಲಿ ಮಲಗಿರುವುದು ಗೋಚರಿಸಿದೆ ಎಂದು ತಿಳಿಸಿದ್ದಾರೆ.

ಎರಡು ತಿಂಗಳಲ್ಲಿ ಹುಲಿ ದಾಳಿಗೆ ಗೋವಿಂದ ಮತ್ತು ಸ್ವಾಮಿ ಅವರಿಗೆ ಸೇರಿದ ಹಸು ಬಲಿಯಾಗಿದ್ದು, ಅರಣ್ಯ ಇಲಾಖೆಗೆ ದೂರು ನೀಡಲಾಗಿದೆ. ಹುಲಿ ದಾಳಿಗೆ ಬಲಿಯಾದ ಹಸುವಿಗೆ ಇಲಾಖೆಯಿಂದ ಯಾವುದೇ ಪರಿಹಾರ ಸಿಕ್ಕಿಲ್ಲ ಎಂದು ತಿಳಿಸಿದ್ದಾರೆ

ಅರಣ್ಯದಂಚಿನಲ್ಲಿ ಕಾಣಿಸಿದ ಹುಲಿ ಸೆರೆಗೆ ಬೋನು ಇಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು