ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು

Last Updated 19 ಸೆಪ್ಟೆಂಬರ್ 2019, 10:31 IST
ಅಕ್ಷರ ಗಾತ್ರ

ಡಿ.ಬನುಮಯ್ಯ ಸ್ವತಂತ್ರ ಪದವಿಪೂರ್ವ ಕಾಲೇಜು: ಸಾಂಸ್ಕೃತಿಕ ವೇದಿಕೆಯ ಉದ್ಘಾಟನಾ ಸಮಾರಂಭ. ಅತಿಥಿ– ಗಾಯಕ ಎಂ.ಆರ್.ಶ್ರೀಹರ್ಷ. ಅಧ್ಯಕ್ಷತೆ– ಡಿ.ಬನುಮಯ್ಯ ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ.ವಿ.ಬಿ.ಜಯದೇವ. ಸ್ಥಳ: ಡಿ.ಬನುಮಯ್ಯ ಕಲಾಭವನ, ಬೆಳಿಗ್ಗೆ 9.30

ಮೈಸೂರು ವಿಶ್ವವಿದ್ಯಾನಿಲಯದ ಉತ್ಕೃಷ್ಟತಾ ಸಂಸ್ಥೆ: ಸೈಂಟಿಫಿಕ್ ಎಕ್ವಿಪ್‌ಮೆಂಟ್‌ ಅ‍ಪ‍್ಲಿಕೇಶನ್ ಅಂಡ್ ಡೇಟಾ ಅನಾಲಿಸಿಸ್ ಇನ್ ಅಡ್ವಾನ್ಸ್ಡ್ ರಿಸರ್ಚ್ ಕುರಿತು 7 ದಿನಗಳ ಕಾರ್ಯಾಗಾರ. ಉದ್ಘಾಟಕರು– ಭಾರತೀಯ ವಿಜ್ಞಾನ ಕಾಂಗ್ರೆಸ್‌ನ ಅಧ್ಯಕ್ಷ ಪ್ರೊ.ಕೆ.ಎಸ್.ರಂಗಪ್ಪ. ಅತಿಥಿ– ಇಂಪಾಲದ ಕೇಂದ್ರ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ಅಯ್ಯಪ್ಪನ್. ಅಧ್ಯಕ್ಷತೆ– ಮೈಸೂರು ವಿ.ವಿ ಕುಲಪತಿ ಪ್ರೊ.ಜಿ.ಹೇಮಂತಕುಮಾರ್. ಸ್ಥಳ: ಉತ್ಕೃಷ್ಟತಾ ಕೇಂದ್ರ ಸಭಾಂಗಣ, ವಿಜ್ಞಾನ ಭವನ, ಮಾನಸಗಂಗೋತ್ರಿ, ಬೆಳಿಗ್ಗೆ 10

ಮೈಸೂರು ವಿಶ್ವವಿದ್ಯಾನಿಲಯದ ಕಾನೂನು ಶಾಲೆ: ನೂತನ ವಿದ್ಯಾರ್ಥಿಗಳಿಗೆ ಅಭಿವಿನ್ಯಾಸ ಕಾರ್ಯಕ್ರಮ. ಉದ್ಘಾಟಕರು– ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ದೇವಮಾನೆ. ಅತಿಥಿ– ನಿವೃತ್ತ ಹಿರಿಯ ಕಾನೂನು ಅಧಿಕಾರಿ ಎಂ.ಲೋಕೇಶ್. ಅಧ್ಯಕ್ಷತೆ– ಕಾನೂನು ಶಾಲೆಯ ನಿರ್ದೇಶಕ ಡಾ.ಸಿ.ಬಸವರಾಜು. ಸ್ಥಳ: ಕಾನೂನು ಶಾಲೆ, ಬೆಳಿಗ್ಗೆ 10.30

ಮೈಸೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗ: ಪ್ರೊ.ಶೇಷಣ್ಣ ದೈಹಿಕ ಶಿಕ್ಷಣ ಮತ್ತು ಕ್ರೀಡೆ ದತ್ತಿ ಉಪನ್ಯಾಸ. ದೈಹಿಕ ಸಾಮರ್ಥ್ಯದ ಪ್ರಾಮುಖ್ಯತೆ ಕುರಿತು ಉಪನ್ಯಾಸ ನೀಡುವವರು– ಭಾರತೀಯ ಕ್ರೀಡಾ ಪ್ರಾಧಿಕಾರದ ಕೊಕೊ ಕ್ರೀಡೆಯ ಮುಖ್ಯ ತರಬೇತುದಾರ ಎಂ.ಕೆ.ಸತ್ಯಕುಮಾರ್. ಅಧ್ಯಕ್ಷತೆ– ಪ್ರಾಧ್ಯಾ‍ಪಕ ಬಿ.ಎಸ್.ವಿಶ್ವನಾಥ್. ಸ್ಥಳ: ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ ಅಧ್ಯಯನ ವಿಭಾಗದ ಸಭಾಂಗಣ, ಸ್ಪೋರ್ಟ್ಸ್‌ ಪೆವಿಲಿಯನ್, ಬೆಳಿಗ್ಗೆ 10.30

ಜಿಲ್ಲಾಡಳಿತ: ಮೈಸೂರು ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟ: ಉದ್ಘಾಟಕರು– ಸಚಿವ ವಿ.ಸೋಮಣ್ಣ, ಅತಿಥಿಗಳು– ಸಂಸದ ಪ್ರತಾಪಸಿಂಹ. ಅಧ್ಯಕ್ಷತೆ– ಶಾಸಕ ತನ್ವೀರ್‌ಸೇಠ್. ಸ್ಥಳ: ಚಾಮುಂಡಿ ವಿಹಾರ ಕ್ರೀಡಾಂಗಣ, ಬೆಳಿಗ್ಗೆ 10.30

ಜೆಎಸ್ಎಸ್ ಮಹಿಳಾ ಕಾಲೇಜು ಮತ್ತು ಜೆಎಸ್ಎಸ್ ಮಹಿಳಾ ಪದವಿಪೂರ್ವ ಕಾಲೇಜು: ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 104ನೇ ಜಯಂತಿ ಹಾಗೂ ಸಾಂಸ್ಕೃತಿಕ, ಸಾಹಿತ್ಯಕ ಮತ್ತು ಕ್ರೀಡಾ ವೇದಿಕೆಗಳ ಉದ್ಘಾಟನಾ ಸಮಾರಂಭ. ಉದ್ಘಾಟಕರು– ಸಾಹಿತಿ ಕಬ್ಬಿನಾಲೆ ವಸಂತ ಭಾರದ್ವಾಜ್. ಅತಿಥಿ– ಅಂತರರಾಷ್ಟ್ರೀಯ ಮಟ್ಟದ ಅಥ್ಲೀಟ್ ಎಂ.ಆರ್.ಧನುಷ. ಅಧ್ಯಕ್ಷತೆ– ಶಾಸಕ ಎಲ್.ನಾಗೇಂದ್ರ. ಸ್ಥಳ: ಕಾಲೇಜಿನ ಆವರಣ, ಬೆಳಿಗ್ಗೆ 11

ಬಹುಜನ ಕ್ರಾಂತಿ ಮೋರ್ಚಾ: ಪರಿವರ್ತನಾ ಯಾತ್ರೆ. ಸಾನಿಧ್ಯ– ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ. ಉದ್ಘಾಟಕರು– ಮೋರ್ಚಾದ ರಾಷ್ಟ್ರೀಯ ಸಂಯೋಜಕ ಪ್ರೊ.ವಿಲಾಸ್‌ ಖರಾತ್. ಅತಿಥಿಗಳು– ಮೋರ್ಚಾದ ರಾಜ್ಯ ಸಂಚಾಲಕ ಡಾ.ಭಾನುಪ್ರಕಾಶ್, ಚಿಂತಕರಾದ ಪ್ರೊ.ಕೆ.ಎಸ್.ಭಗವಾನ್, ಕಾಳೇಗೌಡ ನಾಗವಾರ. ಸ್ಥಳ: ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ, ಗಾಂಧಿನಗರ. ಬೆಳಿಗ್ಗೆ 11

ವಿದ್ಯಾವರ್ಧಕ ‍ಪ್ರಥಮದರ್ಜೆ ಕಾಲೇಜು: ವಿಶೇಷ ಉಪನ್ಯಾಸ ಮಾಲೆ. ವಿಷಯ: ಲಕ್ಷ್ಮೀಶನ ಜೈಮಿನಿ ಭಾರತ: ಒಂದು ಅವಲೋಕನ. ಉಪನ್ಯಾಸಕರು– ಮಹಾರಾಜ ಕಾಲೇಜಿನ ಸಹ ಕನ್ನಡ ಪ್ರಾಧ್ಯಾಪಕ ಡಾ.ಕೆ.ತಿಮ್ಮಯ್ಯ. ಸ್ಥಳ: ಕಾಲೇಜಿನ ಪಿ.ಎಂ.ಚಿಕ್ಕಬೋರಯ್ಯ ಸಭಾಂಗಣ, ಮಧ್ಯಾಹ್ನ 1

ಜೆಎಸ್ಎಸ್ ಆಸ್ಪತ್ರೆ: ಆರೋಗ್ಯ ಸಿರಿ ಯೋಜನೆಗೆ ಚಾಲನೆ. ಸಾನಿಧ್ಯ– ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ. ಚಾಲನೆ ನೀಡುವವರು– ಸಚಿವ ವಿ.ಸೋಮಣ್ಣ. ಯೋಜನೆಯ ಪರಿಚಯ ಪತ್ರ ಬಿಡುಗಡೆ– ಸಂಸದ ಪ್ರತಾಪಸಿಂಹ. ಅಧ್ಯಕ್ಷತೆ– ಶಾಸಕ ಎಸ್.ಎ.ರಾಮದಾಸ್. ಸ್ಥಳ: ರಾಜೇಂದ್ರ ಶತಮಾನೋತ್ಸವ ಸಭಾಂಗಣ, ಸಂಜೆ 4

ಮಣಿಪಾಲ ಯೂನಿವರ್ಸಲ್ ಪ್ರೆಸ್‌, ನಟನ ರಂಗಶಾಲೆ: ಪುಸ್ತಕ ಬಿಡುಗಡೆ ಸಮಾರಂಭ. ಶಿವರಾಮಕಾರಂತ ಅವರ ಸರಸಮ್ಮನ ಸಮಾಧಿ ಕಾದಂಬರಿಯ ಇಂಗ್ಲಿಷ್ ಅನುವಾದ ‘ಎ ಶಿರಿನ್ ಫಾರ್ ಸರಸಮ್ಮ’ ಮತ್ತು ‘ಅಕ್ಕಮಹಾದೇವಿ’ ಪುಸ್ತಕಗಳ ಬಿಡುಗಡೆ. ಉದ್ಘಾಟಕರು– ಪ್ರೊ.ಸಿ.ನಾಗಣ್ಣ. ಅತಿಥಿಗಳು– ರಾಷ್ಟ್ರೀಯ ಅನುವಾದ ಮಿಷನ್‌ನ ಕಚೇರಿ ಉಸ್ತುವಾರಿ ಡಾ.ತಾರೀಖ್‌ ಖಾನ್. ಪುಸ್ತಕದ ಲೇಖಕ ಡಿ.ಎ.ಶಂಕರ್, ನಟ ಮಂಡ್ಯ ರಮೇಶ್. ಸ್ಥಳ: ನಟನ ರಂಗಶಾಲೆ, ಸಂಜೆ 5

ಮೈಸೂರು ದಸರಾ ಮಹೋತ್ಸವ: ಯುವ ಸಂಭ್ರಮ. ಬಯಲು ರಂಗಮಂದಿರ, ಮಾನಸಗಂಗೋತ್ರಿ, ಸಂಜೆ 5.30

‌ರಂಗಾಯಣ: ಶಿವಮೊಗ್ಗ ರಂಗಾಯಣದ ನಾಟಕೋತ್ಸವ. ‘ಟ್ರಾನ್ಸ್‌ನೇಷನ್’ ನಾಟಕ ಪ್ರದರ್ಶನ. ಸ್ಥಳ: ಭೂಮಿಗೀತ ರಂಗಮಂದಿರ, ಸಂಜೆ 6.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT