ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೊಮೆಟೊ ದರ ದಿಢೀರ್ ಕುಸಿತ

ಮೂರೇ ದಿನಗಳಲ್ಲಿ ಅರ್ಧದಷ್ಟು ಬೆಲೆ ಕಡಿಮೆ; ರೈತರಿಗೆ ನಿರಾಸೆ
Last Updated 28 ಜುಲೈ 2020, 3:59 IST
ಅಕ್ಷರ ಗಾತ್ರ

ಮೈಸೂರು:ಇಲ್ಲಿನ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಮೂರೇ ದಿನಗಳಲ್ಲಿ ಶೇ 50ರಷ್ಟು ಕಡಿಮೆಯಾಗಿದ್ದು, ರೈತರು ನಿರಾಶರಾಗಿದ್ದಾರೆ.

ಜುಲೈ 24ರಂದು ಕೆ.ಜಿ ಟೊಮೆಟೊ ₹ 20ಕ್ಕೆ, 26ರಂದು ₹ 15ಕ್ಕೆ ಮಾರಾಟವಾದರೆ, ಸೋಮವಾರ ₹ 10ಕ್ಕೆ ಮಾರಾಟವಾಯಿತು. ಆವಕದ ಪ್ರಮಾಣದಲ್ಲಿ ಹೆಚ್ಚೇನೂ ಏರಿಳಿತವಾಗಿಲ್ಲ. ಆದರೆ, ಬೇಡಿಕೆ ಇದ್ದಕ್ಕಿದ್ದಂತೆ ಕುಸಿದಿದ್ದು ಬೆಲೆ ಇಳಿಕೆಗೆ ಕಾರಣ ಎಂದು ವರ್ತಕ ರಂಗಸ್ವಾಮಿ ಹೇಳುತ್ತಾರೆ.

ಈ ತಿಂಗಳ ಮಧ್ಯಭಾಗದಲ್ಲಿ ರೈತರಿಗೆ ಕೆ.ಜಿಗೆ ₹ 28ರವರೆಗೂ ದರ ಸಿಕ್ಕಿತ್ತು. ಇದರಿಂದ ಬಹಳಷ್ಟು ರೈತರು ಸಂತಸಗೊಂಡಿದ್ದರು. ಆದರೆ, ಈಗ ಬೆಲೆ ಇಳಿಕೆಯತ್ತ ಮುಖ ಮಾಡಿದೆ. ಹಾಪ್‌ಕಾಮ್ಸ್‌ನಲ್ಲಿ ಟೊಮೆಟೊ ದರ ಕೆ.ಜಿಗೆ ₹ 23 ಇದೆ.

ಬೀನ್ಸ್‌ ದರ ದುಪ್ಪಟ್ಟು:ಬೀನ್ಸ್ ಬೆಲೆಯು ಒಂದು ವಾರದಲ್ಲಿ ಶೇ 50ರಷ್ಟು ಹೆಚ್ಚಳವಾಗಿದೆ. ಕಳೆದ ಸೋಮವಾರ ಕೆ.ಜಿಗೆ ₹ 15 ಇದ್ದ ಧಾರಣೆ ಈಗ ₹ 30ಕ್ಕೆ ಹೆಚ್ಚಾಗಿದೆ. ದರ ದುಪ್ಪಟ್ಟುಗೊಂಡಿರುವುದರಿಂದ ಸಹಜವಾಗಿಯೇ ಬೆಳೆಗಾರರಲ್ಲಿ ಹರ್ಷ ತಂದಿದೆ. ಆವಕದ ಪ್ರಮಾಣದಲ್ಲಿ ವ್ಯತ್ಯಾಸವಾಗದೇ ಇದ್ದರೂ, ಬೇಡಿಕೆಯಲ್ಲಿ ಹೆಚ್ಚಳವಾಗಿರುವುದರಿಂದ ಬೆಲೆ ಹೆಚ್ಚಾಗುತ್ತಿದೆ.

ಸಿಹಿಗುಂಬಳದ ಆವಕ ಹೆಚ್ಚಾದರೂ ಕುಗ್ಗದ ಬೆಲೆ:ಸಿಹಿಗುಂಬಳಕ್ಕೆ ಕೇರಳ ವರ್ತಕರಿಂದ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದೆ. ಇದರಿಂದ ಸೋಮವಾರ 490 ಕ್ವಿಂಟಲ್‌ನಷ್ಟು ಸಿಹಿಗುಂಬಳ ಆವಕವಾದರೂ ಬೆಲೆ ಮಾತ್ರ ಕಡಿಮೆಯಾಗಿಲ್ಲ. ಕೆ.ಜಿಗೆ ₹ 6 ಕನಿಷ್ಠ ಧಾರಣೆ ಇದ್ದರೆ, ₹ 8 ಗರಿಷ್ಠ ಧಾರಣೆ ಇದೆ. ಕಳೆದೆರಡು ತಿಂಗಳುಗಳ ಹಿಂದೆ ಇದರ ದರ ₹ 2ಕ್ಕೆ ಕುಸಿದು ರೈತರಲ್ಲಿ ನಿರಾಸೆಗೆ ಕಾರಣವಾಗಿತ್ತು.

ಕ್ಯಾರೆಟ್ ಕೆ.ಜಿಗೆ ₹ 26, ಬದನೆ ₹ 8, ಹಸಿಮೆಣಸಿನಕಾಯಿ ₹ 23, ಎಲೆಕೋಸು ₹ 6, ದಪ್ಪಮೆಣಸಿನಕಾಯಿ ₹ 58ಕ್ಕೆ ಮಾರಾಟವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT