ಸಂಚಾರ ನಿಯಮ ಉಲ್ಲಂಘನೆ; ದಂಡದ ಮೊತ್ತ ₹ 63 ಸಾವಿರ!

7

ಸಂಚಾರ ನಿಯಮ ಉಲ್ಲಂಘನೆ; ದಂಡದ ಮೊತ್ತ ₹ 63 ಸಾವಿರ!

Published:
Updated:

ಮೈಸೂರು: ತಪಾಸಣೆ ವೇಳೆ ಸಿಕ್ಕಿಬಿದ್ದ ದ್ವಿಚಕ್ರ ವಾಹನವೊಂದರ ಮಾಲೀಕ ಬಾಕಿ ಉಳಿಸಿಕೊಂಡ ದಂಡದ ಮೊತ್ತ ₹ 63,500 ಎಂದು ತಿಳಿಯುತ್ತಲೇ ಸಂಚಾರ ಪೊಲೀಸರು ಹೌಹಾರಿದರು. ಏಕೆಂದರೆ, ದ್ವಿಚಕ್ರ ವಾಹನವನ್ನು ಮಾರಾಟ ಮಾಡಿದರೂ ಅಷ್ಟು ಹಣ ಬರುವುದಿಲ್ಲ.

ಎನ್.ಆರ್.ಸಂಚಾರ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾಗ ಕೆ.ಮಧುಪ್ರಸಾದ್ ಅವರಿಗೆ ಸೇರಿದ ಹೊಂಡಾ ಆಕ್ಟಿವಾ ಸ್ಕೂಟರ್‌ ಸಿಕ್ಕಿದೆ. ಇದರ ಸಂಖ್ಯೆಯನ್ನು ಪರಿಶೀಲಿಸಿದಾಗ ವಾಹನದ ಮೇಲೆ ಒಟ್ಟು 635 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ.

ಸದ್ಯ, ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೈಸೂರಿನಲ್ಲಿ ವಶಕ್ಕೆ ಪಡೆದ ಅತಿ ಹೆಚ್ಚು ಪ್ರಕರಣಗಳಿರುವ ವಾಹನ ಇದಾಗಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 1

  Frustrated
 • 2

  Angry

Comments:

0 comments

Write the first review for this !