ಸೋಮವಾರ, ಸೆಪ್ಟೆಂಬರ್ 16, 2019
21 °C

ರೈಲು ಸಂಚಾರ ರದ್ದು

Published:
Updated:
Prajavani

ಮೈಸೂರು: ದಕ್ಷಿಣ ರೈಲ್ವೆ ವ್ಯಾಪ್ತಿಯ ಗುಲಪಾಳ್ಯಮು, ಗುಂತಕಲ್ ನಡುವೆ ಜೋಡಿ ರೈಲು ಮಾರ್ಗ ನಿರ್ಮಾಣ ಹಿನ್ನೆಲೆಯಲ್ಲಿ ಮೈಸೂರಿನಿಂದ ಸಂಚರಿಸುವ ಹಲವು ರೈಲು ಸಂಚಾರ ರದ್ದಾಗಲಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

ಮೈಸೂರು – ಹಜರತ್ ನಿಜಾಮುದ್ದೀನ್ ಸ್ವರ್ಣಜಯಂತಿ ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲು (12781) ಮೇ 17, 24ರಂದು ರದ್ದಾಗಲಿದೆ. ಹಜರತ್ ನಿಜಾಮುದ್ದೀನ್ – ಮೈಸೂರು ಸ್ವರ್ಣಜಯಂತಿ ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲು (12782) ಮೇ 20 ಮತ್ತು 27ರಂದು ರದ್ದಾಗಲಿದೆ.ಮೈಸೂರು – ಬಾಗಲಕೋಟೆ – ಮೈಸೂರು ಬಸವ ಎಕ್ಸ್‌ಪ್ರೆಸ್ ರೈಲು (17307/17308) ಮೇ 3, 9ರಂದು ರದ್ದಾಗಲಿದೆ.

Post Comments (+)