ಭಾನುವಾರ, ಫೆಬ್ರವರಿ 23, 2020
19 °C

ಧರೆಗುರುಳಿದ ಕೊಂಬೆ; ಕೂದಲೆಳೆ ಅಂತರದಲ್ಲಿ ವಾಹನ ಸವಾರರು ಪಾರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಇಲ್ಲಿನ ಕುಕ್ಕರಹಳ್ಳಿ ಸಮೀಪದ ರಸ್ತೆಗೆ ಮರವೊಂದರ ಬೃಹತ್ ಗಾತ್ರದ ಕೊಂಬೆ ಗುರುವಾರ ಸಂಜೆ ಮುರಿದು ಬಿದ್ದಿತು. ಕೂದಲೆಳೆ ಅಂತರದಲ್ಲಿ ವಾಹನ ಸವಾರರು ಪಾರಾದರು.

ಇದರಿಂದ ಸುತ್ತಮುತ್ತಲ ರಸ್ತೆಗಳಲ್ಲಿ ರಾತ್ರಿ ಇಡಿ ಸಂಚಾರ ಬಂದ್ ಆಯಿತು. ಬೃಹತ್ ಗಾತ್ರದ ಕೊಂಬೆಗಳನ್ನು ಪಾಲಿಕೆಯ ರಕ್ಷಣಾ ತಂಡ ‘ಅಭಯ್’ನ ಮೂರೂ ತಂಡಗಳು ಬಂದು ತೆರವುಗೊಳಿಸಿತು. ಒಟ್ಟು 20ಕ್ಕೂ ಅಧಿಕ ಮಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದರು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪಾಲಿಕೆಯ ತೋಟಗಾರಿಕಾ ವಿಭಾಗದ ಸಹಾಯಕ ನಿರ್ದೇಶಕ ಮಣಿಕಂಠ , ‘ಇದೊಂದು ದೊಡ್ಡ ಗಾತ್ರದ ಛತ್ರಿಮರ. ಮೈಸೂರು ವಿ.ವಿ ವ್ಯಾಪ್ತಿಗೆ ಸೇರಿದ ಕೆರೆ ಆವರಣದಿಂದ ರಸ್ತೆಯ ಕಡೆ ಚಾಚಿಕೊಂಡಿದ್ದ ಬೃಹತ್ ಗಾತ್ರದ ಕೊಂಬೆ ಮುರಿದಿದೆ. ಇದು ಮುರಿದು ಬೀಳುವ ಕ್ಷಣದಲ್ಲಿ ರಸ್ತೆಯಲ್ಲಿ ಯಾರೂ ಇಲ್ಲದ್ದರಿಂದ ಅಪಾಯ ತಪ್ಪಿದೆ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು