ಗುರುವಾರ , ಡಿಸೆಂಬರ್ 12, 2019
16 °C

25ರಿಂದ ಅಂಧರ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಸಮರ್ಥನಂ ಅಂಗವಿಕಲರ ಸಂಸ್ಥೆ ಮತ್ತು ಕರ್ನಾಟಕ ಅಂಧರ ಕ್ರಿಕೆಟ್‌ ಸಂಸ್ಥೆ ವತಿಯಿಂದ ನ.25 ರಿಂದ 27 ವರೆಗೆ ಮೈಸೂರಿನಲ್ಲಿ ರಾಷ್ಟ್ರಮಟ್ಟದ ಅಂಧರ ಟ್ವೆಂಟಿ–20 ಕ್ರಿಕೆಟ್ ಟೂರ್ನಿ ಆಯೋಜಿಸಲಾಗಿದೆ.

‘ಇಂಡಸ್‌ ಇಂಡ್‌ ಬ್ಯಾಂಕ್ ನಾಗೇಶ್‌ ಟ್ರೋಫಿ’ ಟೂರ್ನಿಯ ಪಂದ್ಯಗಳು ಇಲ್ಲಿನ ಎಸ್‌ಜೆಸಿಇ ಮೈದಾನದಲ್ಲಿ ನಡೆಯಲಿವೆ ಎಂದು ಸಮರ್ಥನಂ ಸಂಸ್ಥೆಯ ಸಂಸ್ಥಾಪನಾ ಟ್ರಸ್ಟಿ ಜಿ.ಕೆ.ಮಹಾಂತೇಶ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಟೂರ್ನಿಯಲ್ಲಿ ಕರ್ನಾಟಕ ಅಲ್ಲದೆ ದೇಶದ ವಿವಿಧ ರಾಜ್ಯಗಳ 24 ತಂಡಗಳು ಪಾಲ್ಗೊಳ್ಳಲಿವೆ. ವಿಜೇತ ತಂಡಕ್ಕೆ ₹ 1 ಲಕ್ಷ ಹಾಗೂ ‘ರನ್ನರ್‌ ಅಪ್‌’ ತಂಡ ₹ 75 ಸಾವಿರ ನಗದು ಬಹುಮಾನ ಮತ್ತು ಟ್ರೋಫಿ ಲಭಿಸಲಿದೆ. ಉತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ರಾಷ್ಟ್ರೀಯ ಅಂಧರ ಕ್ರಿಕೆಟ್‌ ತಂಡ ಪ್ರತಿನಿಧಿಸಲು ಅವಕಾಶವಿದೆ ಎಂದು ಹೇಳಿದರು.

ಭಾರತ ತಂಡದ ಉಪ ನಾಯಕ ಪ್ರಕಾಶ್ ಜಯರಾಂ, ಪಿ.ವಿ.ರಾಜೇಂದ್ರ, ಕೆ.ವಿ.ರಾಜಣ್ಣ, ಚಂದ್ರಶೇಖರ್ ಸುದ್ದಿಗೋಷ್ಠಿಯಲ್ಲಿ ಇದ್ದರು.

ಪ್ರತಿಕ್ರಿಯಿಸಿ (+)