ಮಂಗಳವಾರ, ಅಕ್ಟೋಬರ್ 26, 2021
21 °C

ಮೈಸೂರು ಮೃಗಾಲಯಕ್ಕೆ ಹೊಸ ಅತಿಥಿಗಳು: ಎರಡು ಗೊರಿಲ್ಲಾ, ನಾಲ್ಕು ಒರಾಂಗುಟಾನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಚಾಮರಾಜೇಂದ್ರ ಮೃಗಾಲಯಕ್ಕೆ ಜರ್ಮನಿ, ಮಲೇಷ್ಯಾ ಹಾಗೂ ಸಿಂಗಪುರದಿಂದ ಹೊಸ ‘ಅತಿಥಿ’ಗಳು ಬಂದಿದ್ದು, ಸಂಭ್ರಮ ನೂರ್ಮಡಿಗೊಂಡಿದೆ. 

ಎರಡು ಗೊರಿಲ್ಲಾ ಹಾಗೂ ನಾಲ್ಕು ಒರಾಂಗುಟಾನ್ ಈಚೆಗೆ ಇಲ್ಲಿನ ಕುಟುಂಬಕ್ಕೆ ಸೇರ್ಪಡೆಗೊಂಡಿವೆ. 

ಜರ್ಮನಿಯಿಂದ ಎರಡು ಗೊರಿಲ್ಲಾ (ತಾಬೊ–14 ವರ್ಷ, ಡಂಬ–8 ವರ್ಷ) ತರಲಾಗಿದೆ. ಮಲೇಷ್ಯಾದಿಂದ ಎರಡು ಒರಾಂಗುಟಾನ್ (ಅಫಾ–5 ವರ್ಷ, ಮಿನ್ನಿ–7 ವರ್ಷ) ಹಾಗೂ ಸಿಂಗಪುರದಿಂದ ಎರಡು ಒರಾಂಗೂಟಾನ್‌ (ಮೆರ್ಲಿನ್‌–17 ವರ್ಷ, ಅಟಿನ–13 ವರ್ಷ) ತರಲಾಗಿದೆ.

ಅತಿ ಬುದ್ಧಿವಂತ ಹಾಗೂ ಅಪರೂಪದ ಒರಾಂಗುಟಾನ್ ಕೋತಿ ಪ್ರಭೇದಕ್ಕೆ ಸೇರಿದ ಪ್ರಾಣಿಯಾಗಿದ್ದು, ಮೃಗಾಲಯದಲ್ಲಿ ಆರೋಗ್ಯವಾಗಿವೆ. ಇವು ಕೂಡ ಚಿಂಪಾಂಜಿ, ಗೊರಿಲ್ಲಾ ಹೋಲುತ್ತವೆ. 

‘ಈ ಪ್ರಾಣಿಗಳನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದ್ದು, ಸದ್ಯದಲ್ಲೇ ಸಾರ್ವಜನಿಕರ ವೀಕ್ಷಣೆಗೆ ಬಿಡಲಾಗುತ್ತದೆ’ ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರ ಅಧ್ಯಕ್ಷ ಎಲ್‌.ಆರ್‌.ಮಹದೇವಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು