ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈನವಿರೇಳಿಸಿದ ವಜ್ರಮುಷ್ಟಿ ಕಾಳಗ

Last Updated 8 ಅಕ್ಟೋಬರ್ 2019, 7:41 IST
ಅಕ್ಷರ ಗಾತ್ರ

ಮೈಸೂರು: ಅರಮನೆ ಆವರಣದ ಕರಿಕಲ್ಲು ತೊಟ್ಟಿಯಲ್ಲಿ ಮಂಗಳವಾರ ಬೆಳಿಗ್ಗೆ ನಡೆದ ಸಾಂಪ್ರದಾಯಿಕ ವಜ್ರಮುಷ್ಟಿ ಕಾಳಗ ನೆರೆದರವರನ್ನು ರೋಮಾಂಚನಗೊಳಿಸಿತು.

ವಿಜಯದಶಮಿಯ ದಿನದಂದು ಯದುವಂಶದ ಅರಸರು ಬನ್ನಿಮರಕ್ಕೆ ಪೂಜೆ ಸಲ್ಲಿಸುವ ಮುನ್ನ ಅರಮನೆ ಅಂಗಳದಲ್ಲಿ ‘ವಜ್ರನಖ’ ಎಂಬ ಆಯುಧ ಧರಿಸಿದ ಜಟ್ಟಿಗಳು ಸೆಣಸಾಡುವುದು ಸಂಪ್ರದಾಯ. ಜಟ್ಟಿಯ ತಲೆಯಿಂದ ರಕ್ತ ಬರುವವರೆಗೂ ಕಾಳಗ ನಡೆಯುತ್ತದೆ.

ಈ ಬಾರಿ ಮೈಸೂರಿನ ಬಲರಾಮ ಜಟ್ಟಿ– ಚನ್ನಪಟ್ಟಣದ ನರಸಿಂಹ ಜಟ್ಟಿ ಮತ್ತು ಬೆಂಗಳೂರಿನ ನಾರಾಯಣ ಜಟ್ಟಿ–ಚಾಮರಾಜನಗರದ ಗಿರೀಶ್‌ ಜಟ್ಟಿ ನಡುವೆ ಪೈಪೋಟಿ ನಡೆಯಿತು.

‍ಬೆಳಿಗ್ಗೆ 10.15ಕ್ಕೆ ಎರಡು ಜೋಡಿಗಳು ಅಖಾಡಕ್ಕೆ ಇಳಿದವು. ಕೇಶಮುಂಡನ ಮಾಡಿಸಿಕೊಂಡಿದ್ದ ಜಟ್ಟಿಗಳು, ಇಡೀ ದೇಹಕ್ಕೆ ಕೆಂಪು ಮಣ್ಣು ಬಳಿದುಕೊಂಡಿದ್ದರು. ಆರಂಭದಲ್ಲಿ ಅಖಾಡಕ್ಕೆ ಒಂದು ಸುತ್ತು ಬಂದು ಪೂಜೆ ಸಲ್ಲಿಸಿದರು.

10.20ರ ವೇಳೆಗೆ ಕಾದಾಟ ಶುರುವಾಯಿತು. ಮೈಸೂರಿನ ಬಲರಾಮ ಜಟ್ಟಿ ಅವರು ತಮ್ಮ ಎದುರಾಳಿ ನರಸಿಂಹ ಜಟ್ಟಿ ಮೇಲೆ ಮಿಂಚಿನಂತೆ ಎರಗಿದರು. ತಲೆಯ ಹಿಂಭಾಗಕ್ಕೆ ವಜ್ರನಖದಿಂದ ಹೊಡೆದು ರಕ್ತ ಒಸರುವಂತೆ ಮಾಡಿದರು. ಕೇವಲ 20 ಸೆಕೆಂಡುಗಳಲ್ಲಿ ಕಾದಾಟ ಕೊನೆಗೊಂಡಿತು.

ನಾರಾಯಣ ಜಟ್ಟಿ ಮತ್ತು ಗಿರೀಶ್‌ ಜಟ್ಟಿ ನಡುವೆ ಕೂಡಾ ರೋಚಕ ಕಾದಾಟ ನಡೆಯಿತು. ಒಂದು ಹಂತದಲ್ಲಿ ಕೆಳಕ್ಕೆ ಬಿದ್ದ ಗಿರೀಶ್‌ ಜಟ್ಟಿಗೆ ವಜ್ರನಖದಿಂದ ಹೊಡೆಯಲು ನಾರಾಯಣ ಜಟ್ಟಿ ಮುಂದಾದರು. ಆದರೆ ಇದಕ್ಕೆ ‘ದಶಮಂದಿ’ಗಳು ಅವಕಾಶ ನೀಡಲಿಲ್ಲ. ನಿಗದಿತ ಸಮಯ ಕೊನೆಗೊಂಡದ್ದರಿಂದ ಈ ಕಾದಾಟ ನಿಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT