ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ತರಕಾರಿ ಬೆಲೆ ಏರಿಳಿತ, ಗೊಂದಲದಲ್ಲಿ ರೈತ

ಕೋಳಿಮೊಟ್ಟೆ ದರದಲ್ಲಿ ಕೊಂಚ ಇಳಿಕೆ
Last Updated 3 ನವೆಂಬರ್ 2020, 1:52 IST
ಅಕ್ಷರ ಗಾತ್ರ

ಮೈಸೂರು: ಕಳೆದೊಂದು ವಾರದಿಂದ ತರಕಾರಿಗಳ ಬೆಲೆಗಳಲ್ಲಿ ಭಾರಿ ಏರಿಳಿತ ಕಂಡು ಬಂದಿದೆ. ಇದರಿಂದ ರೈತರು ಗೊಂದಲಕ್ಕೆ ಒಳಗಾಗಿದ್ದು, ಸರಿಯಾದ ಲಾಭ ಸಿಗದೇ ಪರಿತಪಿಸುತ್ತಿದ್ದಾರೆ.

ಒಂದೇ ದಿನಕ್ಕೆ ಕೆ.ಜಿಗೆ ₹ 5ರಿಂದ ₹ 10ರವರೆಗೆ ದರದಲ್ಲಿ ವ್ಯತ್ಯಾಸವಾಗುತ್ತಿದೆ. ಕೆಲವೊಮ್ಮೆ ಹೆಚ್ಚಾದರೆ, ಮತ್ತೆ ಕೆಲವೊಮ್ಮೆ ಇಳಿಕೆಯಾಗುತ್ತಿದೆ. ಇದು ರೈತರ ಗೊಂದಲಕ್ಕೆ ಕಾರಣವಾಗುತ್ತಿದೆ.

ಇಲ್ಲಿನ ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ಹಸಿಮೆಣಸಿನಕಾಯಿ ಧಾರಣೆ ಅ.27ರಂದು ಕೆ.ಜಿಗೆ ₹ 25 ಇತ್ತು. ಮರುದಿನವೇ ಇದರ ಧಾರಣೆ ₹ 20ಕ್ಕೆ ಕುಸಿತ ಕಂಡಿತು. ಮತ್ತೆ 30ರಂದು ₹ 30ಕ್ಕೆ ಏರಿಕೆ ಕಂಡಿತು. ಸೋಮವಾರ ₹ 23ಕ್ಕೆ ಕಡಿಮೆಯಾಗಿದೆ.

ಟೊಮೆಟೊ ಸಗಟು ಧಾರಣೆಯು ಕೆ.ಜಿಗೆ ₹ 14ರಿಂದ ₹ 9ರವರೆಗೆ ತೂಗೂಯ್ಯಾಲೆಯಲ್ಲಿದೆ. ಎಲೆಕೋಸಿನ ಧಾರಣೆ ಕೆ.ಜಿಗೆ ₹ 32ರಿಂದ ₹ 35, ಹೂಕೋಸಿನ ಬೆಲೆ ₹ 10ರಿಂದ ₹ 22ರವರೆಗೆ ಏರಿಳಿತ ಕಾಣುತ್ತಿದೆ. ಬಹುತೇಕ ತರಕಾರಿಗಳ ಬೆಲೆಗಳಲ್ಲಿ ಅನಿಶ್ಚಿತತೆ ತಲೆದೋರಿದೆ.

‘ಒಂದು ದಿನ ಇದ್ದ ಬೆಲೆ ಮರುದಿನ ಇರುತ್ತದೆ ಎಂಬ ನಂಬಿಕೆ ಇಲ್ಲ. ಮುಂಚೆ ಎಲ್ಲ ಗರಿಷ್ಠ ಎಂದರೆ ಕೆ.ಜಿಗೆ ಒಂದೆರಡು ರೂಪಾಯಿಗಳ ವ್ಯತ್ಯಾಸ ಇರುತ್ತಿತ್ತು. ಈಗ ₹ 5ರಿಂದ ₹ 10ರವರೆಗೆ ವ್ಯತ್ಯಾಸ ಉಂಟಾಗಿದೆ’ ಎಂದು ಶಿರಮಳ್ಳಿಯ ರೈತ ಕಾರ್ತೀಕ ಅಳಲು ತೋಡಿಕೊಂಡರು.

ಉಳಿದಂತೆ, ಕ್ಯಾರೆಟ್ ಬೆಲೆ ಕೆ.ಜಿಗೆ ₹ 75ರಿಂದ 60ಕ್ಕೆ, ದಪ್ಪಮೆಣಸಿನಕಾಯಿ ₹ 40ರಿಂದ ₹ 35ಕ್ಕೆ ಕಡಿಮೆಯಾಗಿದೆ. ಬೀನ್ಸ್ ಬೆಲೆ ₹ 20ರಿಂದ ₹ 25ಕ್ಕೆ ಏರಿಕೆಯಾಗಿದೆ. ಬದನೆ ಬೆಲೆ ಕೆ.ಜಿಗೆ ₹ 14ರಲ್ಲೇ ಸ್ಥಿರವಾಗಿದೆ.

ರಾಷ್ಟ್ರೀಯ ಮೊಟ್ಟೆ ದರ ಸಮನ್ವಯ ಸಮಿತಿಯ ದರವು ಈ ವಾರ ಕೊಂಚ ಇಳಿಕೆಯಾಗಿದೆ. ಒಂದು ಮೊಟ್ಟೆಯ ಸಗಟು ಬೆಲೆ ₹ 5.27ರಿಂದ 5.10ಕ್ಕೆ ಕಡಿಮೆಯಾಗಿದೆ.

ಇಳಿಯದ ಈರುಳ್ಳಿ ಧಾರಣೆ

ಈರುಳ್ಳಿ ಧಾರಣೆ ಈ ವಾರವೂ ಕೆ.ಜಿಗೆ ₹ 100ರಲ್ಲೇ ಮುಂದುವರಿದಿದೆ. ಹಾಪ್‌ಕಾಮ್ಸ್‌ನಲ್ಲಿ ಕೆ.ಜಿಗೆ ₹ 100 ಇದ್ದರೆ, ಉಳಿದ ಚಿಲ್ಲರೆ ಮಾರುಕಟ್ಟೆಗಳಲ್ಲಿ ಇದರ ಆಸುಪಾಸಿನಲ್ಲೇ ದರ ನಿಗದಿಯಾಗಿದೆ. ಎಪಿಎಂಸಿ ಸಗಟು ಮಾರುಕಟ್ಟೆಗೆ ಈ ವಾರವೂ ಈರುಳ್ಳಿ ಹೆಚ್ಚಿನ ಪ್ರಮಾಣದಲ್ಲಿ ಆವಕವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT