10ರಿಂದ ಅ.19ರವರೆಗೆ ನಗರದ ಹಲವೆಡೆ ಏಕಮುಖ ಸಂಚಾರ ಜಾರಿಗೆ

7

10ರಿಂದ ಅ.19ರವರೆಗೆ ನಗರದ ಹಲವೆಡೆ ಏಕಮುಖ ಸಂಚಾರ ಜಾರಿಗೆ

Published:
Updated:

ಮೈಸೂರು: ಅ. 10ರಿಂದ 19ರವರೆಗೆ ಪ್ರತಿದಿನ ಮದ್ಯಾಹ್ನ 3-00 ಗಂಟೆಯಿಂದ ರಾತ್ರಿ 9-30 ಗಂಟೆಯವರೆಗೆ ನಗರದ ಹಲವೆಡೆ ಸಂಚಾರ ಮಾರ್ಗದಲ್ಲಿ ಮಾರ್ಪಾಟು ಮಾಡಲಾಗಿದೆ. ಕೆಲವೆಡೆ ಏಕಮುಖ ಸಂಚಾರವನ್ನು ಜಾರಿಗಳಿಸಲಾಗಿದೆ.

ಅರಮನೆಯ ಸುತ್ತಲಿನ ರಸ್ತೆಗಳಾದ ಜೆ.ಎಸ್.ಎಸ್.ವೃತ್ತ- ಕುಸ್ತಿಅಖಾಡ ಜಂಕ್ಷನ್, ಬಿ.ಎನ್.ರಸ್ತೆ- ಹಾರ್ಡಿಂಗ್ ವೃತ್ತ- ಎ.ವಿ.ರಸ್ತೆ- ಹಳೆಪ್ರತಿಮೆ ವೃತ್ತ- ಎ.ವಿ.ರಸ್ತೆ-ಕೆ.ಆರ್. ವೃತ್ತ- ನ್ಯೂ ಎಸ್.ಆರ್.ರಸ್ತೆ- ಪಾಠಶಾಲಾ ವೃತ್ತ- ಚಾಮರಾಜ ರಸ್ತೆ- ಜೆ.ಎಸ್.ಎಸ್. ವೃತ್ತ. ಈ ರಸ್ತೆಗಳಲ್ಲಿ ಅರಮನೆಯನ್ನು ಮದ್ಯಬಿಂದುವನ್ನಾಗಿ ಪರಿಗಣಿಸಿ ಗಡಿಯಾರದ ಮುಳ್ಳು ಸುತ್ತುವ ದಿಕ್ಕಿಗೆ ವಿರುದ್ದ ದಿಕ್ಕಿನಲ್ಲಿ (ಆಂಟಿ ಕ್ಲಾಕ್ ವೈಸ್) ವಾಹನಗಳು ಸಂಚರಿಸುವಂತೆ ಸೂಚಿಸಲಾಗಿದೆ. ಇಲ್ಲಿ ಗಡಿಯಾರದ ಮುಳ್ಳು ಸುತ್ತುವ ದಿಕ್ಕಿನಲ್ಲಿ (ಕ್ಲಾಕ್ ವೈಸ್) ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಆದರೆ, ಈ ನಿರ್ಬಂಧ ಪಾಠಶಾಲಾ ವೃತ್ತದಿಂದ ಪೂರ್ವಕ್ಕೆ ಜೆಎಸ್‍ಎಸ್ ವೃತ್ತವರೆಗಿನ ರಸ್ತೆಗೆ ಇರುವುದಿಲ್ಲ.

ನ್ಯೂ ಎಸ್.ಆರ್.ರಸ್ತೆ, ಕೆ.ಆರ್.ವೃತ್ತದಿಂದ ಆಯುರ್ವೇದಿಕ್ ವೃತ್ತ- ಪೂರ್ವಕ್ಕೆ ಇರ್ವಿನ್ ರಸ್ತೆ- ನೆಹರೂ ವೃತ್ತ- ಅಶೋಕ ರಸ್ತೆ- ಮಹಾವೀರ ವೃತ್ತ- ಹಳೆ ಪ್ರತಿಮೆ ವೃತ್ತ. ಈ ರಸ್ತೆಗಳ ಮಧ್ಯ ಇರುವ ಪ್ರದೇಶವನ್ನು ಮಧ್ಯಬಿಂದುವನ್ನಾಗಿ ಪರಿಗಣಿಸಿ ಗಡಿಯಾರದ ಮುಳ್ಳು ಸುತ್ತುವ ದಿಕ್ಕಿಗೆ (ಕ್ಲಾಕ್ ವೈಸ್) ವಾಹನಗಳು ಸಂಚರಿಸುವಂತೆ ಹಾಗೂ ಈ ರಸ್ತೆಗಳಲ್ಲಿ ಗಡಿಯಾರದ ಮುಳ್ಳು ಸುತ್ತುವ ವಿರುದ್ದ ದಿಕ್ಕಿನಲ್ಲಿ (ಆಂಟಿ ಕ್ಲಾಕ್ ವೈಸ್) ವಾಹನಗಳು ಸಂಚರಿಸದಂತೆ ನಿರ್ಬಂಧಿಸಲಾಗಿದೆ. ಆದರೆ, ಈ ನಿರ್ಬಂಧ ಅ. 19ರಂದು ದಸರಾ ಮೆರವಣಿಗೆಯು ಪ್ರಾರಂಭವಾಗಿ ಆಯುರ್ವೇದಿಕ್ ವೃತ್ತ ದಾಟುವವರೆಗಿನ ಸಮಯಕ್ಕೆ ಇರುವುದಿಲ್ಲ.

* ನೆಹರೂ ವೃತ್ತದಿಂದ ಬಿ.ಎನ್.ರಸ್ತೆ ಜಂಕ್ಷನ್‌ವರೆಗೆ ಪಶ್ಚಿಮದಿಂದ ಪೂರ್ವಕ್ಕೆ ಏಕಮುಖ ವಾಹನ ಸಂಚಾರಕ್ಕೆ ಅನುವು ಮಾಡಿ, ಪೂರ್ವದಿಂದ ಪಶ್ಚಿಮಕ್ಕೆ ಎಲ್ಲಾ ಮಾದರಿಯ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.

* ಬನುಮಯ್ಯ ರಸ್ತೆಯಲ್ಲಿ ಚಾಮರಾಜ ಜೋಡಿ ರಸ್ತೆ ಜಂಕ್ಷನ್‍ನಿಂದ ಬನುಮಯ್ಯ ಚೌಕದವರೆಗೆ ದಕ್ಷಿಣದಿಂದ ಉತ್ತರಕ್ಕೆ ವಾಹನಗಳ ಏಕಮುಖ ಸಂಚಾರಕ್ಕೆ ಅನುವು ಮಾಡಿ ಉತ್ತರದಿಂದ ದಕ್ಷಿಣಕ್ಕೆ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.

* ತ್ಯಾಗರಾಜ ರಸ್ತೆಯಲ್ಲಿ ಎನ್.ಮಾಧವರಾವ್ ವೃತ್ತದಿಂದ (ಅಗ್ರಹಾರ ವೃತ್ತ) ಚಾಮರಾಜ ಜೋಡಿ ರಸ್ತೆ ಜಂಕ್ಷನ್‍ವರೆಗೆ ದಕ್ಷಿಣದಿಂದ ಉತ್ತರಕ್ಕೆ ವಾಹನಗಳ ಏಕಮುಖ ಸಂಚಾರಕ್ಕೆ ಅನುವು ಮಾಡಿ ಈ ಭಾಗದಲ್ಲಿ ಉತ್ತರದಿಂದ ದಕ್ಷಿಣಕ್ಕೆ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.

* ಕೃಷ್ಣರಾಜ ಬುಲೆವಾರ್ಡ್‌ ರಸ್ತೆಯಲ್ಲಿ ಕೌಟಿಲ್ಯ ವೃತ್ತದಿಂದ ಹುಣಸೂರು ರಸ್ತೆ ಆರ್ಚ್ ಗೇಟ್ ಜಂಕ್ಷನ್‌ವರೆಗೆ ದಕ್ಷಿಣದಿಂದ ಉತ್ತರಕ್ಕೆ ವಾಹನಗಳ ಏಕಮುಖ ಸಂಚಾರಕ್ಕೆ ಅನುವು ಮಾಡಿ ಈ ಭಾಗದಲ್ಲಿ ಉತ್ತರದಿಂದ ದಕ್ಷಿಣಕ್ಕೆ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.

‌* ಅ. 11ರಿಂದ 17ರವರೆಗೆ ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 11 ಗಂಟೆವರೆಗೆ ಕೆ.ಆರ್.ಬಿ ರಸ್ತೆಯಲ್ಲಿ ಕೌಟಿಲ್ಯ ವೃತ್ತದಿಂದ ಏಕಲವ್ಯ ವೃತ್ತದವರೆಗೆ ಎಲ್ಲ ಮಾದರಿಯ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !