ಗಾಯಕ ವಿಜಯಪ್ರಕಾಶ್‌ಗೆ ಪಿತೃ ವಿಯೋಗ

ಶುಕ್ರವಾರ, ಏಪ್ರಿಲ್ 19, 2019
30 °C

ಗಾಯಕ ವಿಜಯಪ್ರಕಾಶ್‌ಗೆ ಪಿತೃ ವಿಯೋಗ

Published:
Updated:
Prajavani

ಮೈಸೂರು: ಗಾಯಕ ವಿಜಯಪ್ರಕಾಶ್ ಅವರ ತಂದೆ ಹಾಗೂ ಖ್ಯಾತ ಸಂಗೀತಗಾರರೂ ಆದ ರಾಮಶೇಷು (72) ಅವರು ಅನಾರೋಗ್ಯದಿಂದ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ನಿಧನ ಹೊಂದಿದರು. ಬೋಗಾದಿಯ್ಲಲಿರುವ ಇವರ ನಿವಾಸದಲ್ಲಿ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಇವರಿಗೆ ಪತ್ನಿ ಗಾಯಕಿ ಲೋಪಾಮುದ್ರಾ, ಪುತ್ರರಾದ ಫಣೀಂದ್ರಕುಮಾರ್ ಹಾಗೂ ಗಾಯಕ ವಿಜಯಪ್ರಕಾಶ್ ಇದ್ದಾರೆ.

ವಿಜಯಪ್ರಕಾಶ್ ಸದ್ಯ ಅಮೆರಿಕದಲ್ಲಿದ್ದು ಅವರು ಬಂದ ನಂತರ ಏಪ್ರಿಲ್ 9ರಂದು ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಪ್ರಸಿದ್ಧ ಗಾಯಕರಾಗಿದ್ದ ರಾಮಶೇಷು:

ತಂದೆ ಸುಪ್ರಸಿದ್ದ ಹರಿಕಥಾ ವಿದ್ವಾನ್ ಆಗಿದ್ದ ಎಲ್.ಲಕ್ಷ್ಮೀಪತಿ ಭಾಗವತರ ಮಾರ್ಗದರ್ಶನದಲ್ಲಿ ತಮ್ಮ 10ನೇ ವಯಸ್ಸಿನಲ್ಲೇ ಸಂಗೀತ ಲೋಕಕ್ಕೆ ರಾಮಶೇಷು ಪಾದಾರ್ಪಣೆ ಮಾಡಿದರು. ಕರ್ನಾಟಕ ಸಂಗೀತ ಶೈಲಿಯ ಹಾಡುಗಾರಿಕೆಯಿಂದ ಇವರು ಹೆಚ್ಚು ಪ್ರಸಿದ್ಧಿ ಹೊಂದಿದ್ದರು. ಇವರು ಹೊರ ರಾಜ್ಯ ಮತ್ತು ವಿದೇಶಗಳಲ್ಲೂ ಅನೇಕ ಸಂಗೀತ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದ್ದಾರೆ. ಇವರ ಪತ್ನಿ ಲೋಪಾಮುದ್ರಾ ಸಹ ಗಾಯಕರು ಮತ್ತು ಸಂಗೀತ ಶಿಕ್ಷಕರೂ ಆಗಿದ್ದಾರೆ. ಇವರ ಹಿರಿಯ ಪುತ್ರ ಫಣೀಂದ್ರಕುಮಾರ್ ಹವ್ಯಾಸಿ ರಂಗಭೂಮಿಯ ಕಲಾವಿದರು ಹಾಗೂ ಕಿರಿಯಪುತ್ರ ವಿಜಯಪ್ರಕಾಶ್ ಚಲನಚಿತ್ರ ಗಾಯಕರಾಗಿದ್ದಾರೆ. ರಾಮಶೇಷು ಅವರನ್ನು ಕರ್ನಾಟಕ ಗಾನಕಲಾ ಪರಿಷತ್ತು ‘ಗಾನ ಕಲಾ ಕಸ್ತೂರಿ’ ಎಂಬ ಬಿರುದು ನೀಡಿ ಸನ್ಮಾನಿಸಿದೆ.

ಬರಹ ಇಷ್ಟವಾಯಿತೆ?

 • 8

  Happy
 • 1

  Amused
 • 9

  Sad
 • 1

  Frustrated
 • 0

  Angry

Comments:

0 comments

Write the first review for this !