ಗುರುವಾರ , ಜೂಲೈ 9, 2020
23 °C

ಖರೀದಿಸಲಾಗದ ಸಂಪತ್ತು ಹೊಂದಿದವರೇ ಹೃದಯ ಶ್ರೀಮಂತರು: ನಿವೃತ್ತ ನ್ಯಾಯಮೂರ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ಹಣದಿಂದ ಖರೀದಿಸಲಾಗದ ಸಂಪತ್ತು ಹೊಂದಿರುವವರೇ ಹೃದಯ ಶ್ರೀಮಂತರು’ ಎಂದು ಹೈಕೋರ್ಟ್‌ನ ವಿಶ್ರಾಂತ ನ್ಯಾಯಮೂರ್ತಿ ಅರಳಿ ನಾಗರಾಜ ತಿಳಿಸಿದರು.

ಶರಣು ವಿಶ್ವವಚನ ಫೌಂಡೇಷನ್ ಅಂತರ್ಜಾಲದ ಮೂಲಕ ಹಮ್ಮಿಕೊಂಡಿದ್ದ 5ನೇ ಅಂತರರಾಷ್ಟ್ರೀಯ ಅಂತರ್ಜಾಲ ಪ್ರವಚನದಲ್ಲಿ ಶರಣ ಸಾಹಿತ್ಯದ ಅನುಷ್ಠಾನ ಎಂಬ ವಿಷಯ ಕುರಿತು ಪ್ರವಚನ ನೀಡಿದ ಅವರು, ‘ಪ್ರಾಮಾಣಿಕತೆ, ಆರೋಗ್ಯ, ಏಕಾಗ್ರತೆ, ಭಕ್ತಿ ಮುಂತಾದವುಗಳನ್ನು ಹಣ ಕೊಟ್ಟು ಖರೀದಿಸಲು ಯಾರಿಂದಲೂ ಸಾಧ್ಯವಿಲ್ಲ. ಇವುಗಳನ್ನು ಯಾರು ಜೀವನದಲ್ಲಿ ಅಳವಡಿಸಿಕೊಂಡಿರುತ್ತಾರೋ ಅವರು ಮಾದರಿ ವ್ಯಕ್ತಿಗಳಾಗಿ ರೂಪುಗೊಳ್ಳುತ್ತಾರೆ’ ಎಂದರು.

ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪಾ ಕುಮಾರಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ಡಾ.ವಚನ ಕುಮಾರಸ್ವಾಮಿ, ಕೇಂದ್ರೀಯ ಸಂಚಾಲಕಿ ಸುಧಾ ಮೃತ್ಯುಂಜಯಪ್ಪ, ಬಹರೇನ್‌ನ ಶರಣು ವಿಶ್ವವಚನ ಫೌಂಡೇಷನ್ ಅಧ್ಯಕ್ಷ ಶಿವಾನಂದ ಪಾಟೀಲ್, ಓಂಕಾರಯ್ಯ, ಸರಸ್ವತಿ ರಾಮಣ್ಣ, ಬಸವರಾಜು ಗವತಿ, ಸುಮಂಗಳಾ ಆರ್, ಪಾರ್ವತಿ ಶಂಕರ್, ಉಷಾ ನಾಗೇಶ್, ಚಂಚಲ ಜಯದೇವ್, ಸಂಧ್ಯಾ ಸದಾನಂದ್, ಡಾ.ಮುಡಿಗುಂಡ ಪುಟ್ಟಪ್ಪ, ಸುನಿತಾ ಅಂಗಡಿ ಕೊಡೇಕಲ್, ಕಣ್ಣೂರು ಕುಮಾರಸ್ವಾಮಿ, ಮಾರುತೇಶ್, ಅನಿತಾ ನಾಗರಾಜ್, ಜೆ.ಕವಿತಾ, ಡಾ.ನಾಗಪ್ಪ ಗೋಗಿ, ಆರ್.ನರೇಂದ್ರ, ಪ್ರಭುಸ್ವಾಮಿ, ಜಯಪ್ರಕಾಶ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು