ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುದಾನದಲ್ಲಿ ರಾಜಕೀಯ ಸಾಹಿತ್ಯಕ್ಕೆ ₹ 50 ಲಕ್ಷ ಮೀಸಲು: ಎಚ್‌. ವಿಶ್ವನಾಥ್

Last Updated 9 ಮೇ 2022, 2:41 IST
ಅಕ್ಷರ ಗಾತ್ರ

ಮೈಸೂರು: ‌‘ಎಂಎಲ್‌ಸಿ ಅನುದಾನದಲ್ಲಿ ಸಿಗುವ ₹ 2 ಕೋಟಿ ಮೊತ್ತದಲ್ಲಿ₹ 50 ಲಕ್ಷವನ್ನು ರಾಜಕೀಯ ಸಾಹಿತ್ಯ ಪ್ರೋತ್ಸಾಹಿಸಲು ಕನ್ನಡ ಸಾಹಿತ್ಯ ಪರಿಷತ್ತಿಗೆ ನೀಡಲಾಗುವುದು’ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್ ಹೇಳಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಭಾನುವಾರ ಇಲ್ಲಿ ಆಯೋಜಿಸಿದ್ದ ‘ವಿಶ್ವನಾಥ್‌ 75ರ ಸಂಭ್ರಮ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಗ್ರಾಮ ಪಂಚಾಯಿತಿ ಸದಸ್ಯರಿಂದ ಹಿಡಿದು ಶಾಸಕರು, ಸಂಸದರು, ಸಚಿವರು ಸೇರಿದಂತೆ ಎಲ್ಲರೂ ತಮ್ಮ ಅನುಭವಗಳನ್ನು ಒಳಗೊಂಡ ಪುಸ್ತಕಗಳನ್ನು ಬರೆಯಲಿ. ಅವರು ಬರೆಯುವ ಪುಸ್ತಕಗಳನ್ನು ಈ ಹಣದಲ್ಲಿ ಮುದ್ರಿಸಿ ಜನರಿಗೆ ಹಂಚುತ್ತೇವೆ. ಇದನ್ನು ಸಾಹಿತ್ಯ ಪರಿಷತ್ತು ಗಂಭೀರವಾಗಿ ಪರಿಗಣಿಸಬೇಕು’ ಎಂದರು.

‘ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರಾಜಕೀಯ ಸಾಹಿತ್ಯದ ಗೋಷ್ಠಿಗೂ ಅವಕಾಶ ಕಲ್ಪಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ರಾಜಕಾರಣವನ್ನೇ ಉಸಿರಾಡುತ್ತೇವೆ. ಆದರೆ, ಇಲ್ಲಿ ರಾಜಕಾರಣದ ಬಗ್ಗೆ ಪುಸ್ತಕ, ಸಾಹಿತ್ಯ ಇಲ್ಲ. ರಾಜಕೀಯವನ್ನು ಮೈಲಿಗೆಯಾಗಿ ನೋಡುವ ಪರಂಪರೆ ಬೆಳೆದುಬಂದಿದೆ. ಸಾಹಿತ್ಯದ ಮೂಲಕವಾದರೂ ಅದನ್ನು ಹೋಗಲಾಡಿಸಬೇಕು’ ಎಂದು ಅಭಿಪ್ರಾಯಪಟ್ಟರು.

ವಿದೇಶಗಳಲ್ಲೂ ಕಸಾಪ ಘಟಕ: ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ ಮಾತನಾಡಿ, ‘ವಿದೇಶಗಳಲ್ಲೂ ಕನ್ನಡ ಸಾಹಿತ್ಯ ಪರಿಷತ್ತಿನ ಘಟಕ ಆರಂಭಿಸಲು ನಿರ್ಧರಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT