ಮಂಡ್ಯದಲ್ಲಿ ಸುಮಲತಾರನ್ನೇ ಗೆಲ್ಲಿಸಿ: ನರೇಂದ್ರ ಮೋದಿ

ಗುರುವಾರ , ಏಪ್ರಿಲ್ 25, 2019
31 °C

ಮಂಡ್ಯದಲ್ಲಿ ಸುಮಲತಾರನ್ನೇ ಗೆಲ್ಲಿಸಿ: ನರೇಂದ್ರ ಮೋದಿ

Published:
Updated:

ಮೈಸೂರು: ‘ಈ ಬಾರಿ ಮಂಡ್ಯದಿಂದ ಸುಮಲತಾ ಅವರನ್ನೇ ಗೆಲ್ಲಿಸಿ’ ಎಂದು ಪ್ರಧಾನಿ ನರೇಂದ್ರ ಮೋದಿ ಸುಮಲತಾ ಪರ ಮತ ಯಾಚಿಸಿದರು.

ಇಲ್ಲಿನ ಮಹಾರಾಜ ಕಾಲೇಜು ಮೈದಾನದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಸಂಕಲ್ಪನಾ ರ್‍ಯಾಲಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸುಮಲತಾ ಬಿಜೆಪಿಗೆ ಸೇರುತ್ತಾರೆ ಎನ್ನುವ ಮಾತುಗಳು ಚುನಾವಣಾ ರಂಗದಲ್ಲಿ ಗರಿಗೆದರುತ್ತಿರುವ ನಡುವೆಯೇ ಮೋದಿ, ಅವರ ಪರ ಪ್ರಚಾರ ನಡೆಸಿದ್ದು ಆ ಮಾತುಗಳಿಗೆ ಮತ್ತಷ್ಟು ಇಂಬು ನೀಡಿದಂತಾಗಿದೆ.

ಮೋದಿ ಅವರು ಮೈಸೂರಿನ ರ್‍ಯಾಲಿ ಉದ್ದೇಶಿಸಿ ಮಾತನಾಡುವಾಗ ಅಂಬರೀಷ್ ಹೆಸರು ಪ್ರಸ್ತಾಪಿಸುವುದನ್ನು ಮರೆಯಲಿಲ್ಲ. ಅಂಬರೀಷ್‌ ಅವರ ಹೆಸರು ಹೇಳುತ್ತಿದ್ದಂತೆ ಮೈದಾನದಲ್ಲಿ ಸೇರಿದ್ದ ಜನರು ‘ಓ’ ಎಂದು ಕೂಗಿ ಸಂತಸ ವ್ಯಕ್ತಪಡಿಸಿದರು.

‘ಮೈಸೂರಿನ ಮತ್ತು ಕರ್ನಾಟಕದ ಅಭಿವೃದ್ದಿಗೆ ಅಂಬರೀಷ್ ಅವರು ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರು ಮಾಡಿದ ಒಳ್ಳೆಯ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗಲು ಸುಮಲತಾ ಅವರನ್ನು ಬೆಂಬಲಿಸಿ, ಗೆಲ್ಲಿಸಿ’ ಎಂದು ಮೋದಿ ಕೋರಿದರು.

ಬರಹ ಇಷ್ಟವಾಯಿತೆ?

 • 23

  Happy
 • 8

  Amused
 • 1

  Sad
 • 0

  Frustrated
 • 4

  Angry

Comments:

0 comments

Write the first review for this !