ಬೆಟ್ಟದಪುರದಲ್ಲಿ ನೀರು ಅಸಮರ್ಪಕ ಪೂರೈಕೆ

7

ಬೆಟ್ಟದಪುರದಲ್ಲಿ ನೀರು ಅಸಮರ್ಪಕ ಪೂರೈಕೆ

Published:
Updated:
ಪೈಪ್ ಒಡೆದು ಹೋಗಿ ನೀರು ಪೋಲಾಗುತ್ತಿರುವುದು.

ಬೆಟ್ಟದಪುರ: ಬೆಟ್ಟದಪುರ ಗ್ರಾಮದಲ್ಲಿ  ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆಯಾಗದೆ ಸಾವರ್ಜನಿಕರು ಪರದಾಡುವ ಪರಿಸ್ಥಿತಿ ಎದುರಾಗಿದೆ.

ಇಲ್ಲಿನ ರಾಜ್ಯಹೆದ್ದಾರಿಯಿಂದ ಶಿಡ್ಲುಮಲ್ಲಿಕಾಜುರ್ನ ಸ್ವಾಮಿ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ನಡೆಯುತ್ತಿದ್ದ ಕಾರಣ ನೀರು ಸರಬರಾಜನ್ನು ಕೆಲದಿನಗಳ ಹಿಂದೆ ಸ್ಥಗಿತಗೊಳಿಸಲಾಗಿತ್ತು. ಈಗ ರಸ್ತೆ ಕಾಮಗಾರಿ ಮುಕ್ತಾಯಗೊಳ್ಳುವ ಹಂತದಲ್ಲಿದ್ದು ಎರಡು ತಿಂಗಳ ಹಿಂದೆಯೇ ನೂತನ ಪೈಪ್‌ಗಳನ್ನು ಅಳವಡಿಸಿ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ, ಸರ್ಕಾರಿ ಪದವಿಪೂರ್ವಕಾಲೇಜಿನ ಮುಂಭಾಗದಲ್ಲಿ ಪೈಪ್ ಒಡೆದುಹೋಗಿ ನೀರು ಪೋಲಾಗುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿಲ್ಲ. ಇದರ ಪರಿಣಾಮವಾಗಿ ತಿಂಗಳಿನಿಂದಲೂ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ’ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

‘ವಾಟರ್‌ಮೆನ್‌ಗಳನ್ನು ಕೇಳಿದರೆ ಈಗ ಬರುತ್ತಿರುವ ನೀರನ್ನು ಬಳಸಿ. ಇಲ್ಲದಿದ್ದರೆ ಸಂಪೂರ್ಣ ಪೂರೈಕೆಯನ್ನೇ ನಿಲ್ಲಿಸುತ್ತೇವೆ ಎಂದು ಉಡಾಫೆಯಾಗಿ ಉತ್ತರಿಸುತ್ತಾರೆ. ನಸುಕಿನ 3 ಗಂಟೆಯಲ್ಲಿ ನೀಡು ಬಿಡುತ್ತಿದ್ದು, ಹಿಡಿದಿಟ್ಟುಕೊಳ್ಳಲು ಪರದಾಡಬೇಕಿದೆ’ ಎಂದು ಮಹಿಳೆಯರು ದೂರಿದ್ದಾರೆ.

ಪ್ರತಿ ಮೂರು ದಿನಗಳಿಗೊಮ್ಮೆ ಅಲ್ಪ ಪ್ರಮಾಣದ ನೀರು ಬಿಡುತ್ತಿದ್ದು, ಅನೇಕ ಬಾರಿ ಮನವಿ ಮಾಡಿದ್ದರೂ ಕ್ರಮಕೈಗೊಂಡಿಲ್ಲ. ಅಲ್ಲದೇ,  ಸರಿಯಾಗಿ ಕಾರ್ಯನಿರ್ವಹಿಸಲು ವಿಫಲರಾಗಿರುವ ವಾಟರ್‌ಮೆನ್‌ಗಳ ವಿರುದ್ಧ ಗ್ರಾಮಪಂಚಾಯಿತಿ ಅಧಿಕಾರಿಗಳ ಬಳಿ ಹಲವು ಬಾರಿ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಿ ಸಮಸ್ಯೆ ನಿವಾರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !