ಪತಿಗೆ ಲಿವರ್‌ ದಾನ ಮಾಡಿದ ಪತ್ನಿ

7

ಪತಿಗೆ ಲಿವರ್‌ ದಾನ ಮಾಡಿದ ಪತ್ನಿ

Published:
Updated:

ಮೈಸೂರು: ಪತ್ನಿಯು ತನ್ನ ಪತಿಗೆ ಪಿತ್ತಜನಕಾಂಗ ದಾನ ಮಾಡಿ ಬಾಳಿಗೆ ಬೆಳಕು ನೀಡಿದ್ದಾರೆ.

ಕಾಮಾಲೆ (ಜಾಂಡೀಸ್‌) ಸಮಸ್ಯೆಯಿಂದ ಬಳಲುತ್ತಿದ್ದ ಕನಕಪುರ ಮೂಲದ ಸೋಮಶೇಖರ್ ಅವರಿಗೆ ಪತ್ನಿ ರಾಣಿ ಲಿವರ್‌ ದಾನ ಮಾಡಿದ್ದಾರೆ. ಇಲ್ಲಿನ ಅಪೋಲೊ ಬಿಜಿಎಸ್‌ ಆಸ್ಪತ್ರೆಯ ವೈದ್ಯರ ತಂಡವು ಯಶಸ್ವಿಯಾಗಿ ಅಂಗಾಂಗ ಕಸಿ ಶಸ್ತ್ರಚಿಕಿತ್ಸೆ ನಡೆಸಿದೆ.

‘ಜೀವಂತ ವ್ಯಕ್ತಿಯಿಂದ ಲಿವರ್‌ ಪಡೆದು ಕಸಿ ಮಾಡಿರುವುದು ನಗರದಲ್ಲಿ ಇದೇ ಮೊದಲು. ಸೋಮಶೇಖರ್ ಅವರ ಲಿವರ್‌ ಸಂಪೂರ್ಣ ಹಾಳಾಗಿತ್ತು. ರಾಣಿ ಅವರಿಂದ ಅರ್ಧ ಭಾಗದಷ್ಟು ಲಿವರ್‌ ಪಡೆದು ಕಸಿ ಮಾಡಲಾಯಿತು. ಪತಿ– ಪತ್ನಿಯರಿಬ್ಬರೂ ಈಗ ಆರೋಗ್ಯದಿಂದ ಇದ್ದಾರೆ’ ಎಂದು ಆಸ್ಪತ್ರೆಯ ಪಿತ್ತಜನಕಾಂಗ ಶಸ್ತ್ರಚಿಕಿತ್ಸಕ ಮನೀಶಚಂದ್ರ ವರ್ಮಾ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಈವರೆಗೆ ಮಿದುಳು ನಿಷ್ಕ್ರಿಯಗೊಂಡ ವ್ಯಕ್ತಿಗಳಿಂದ ಮಾತ್ರ ಲಿವರ್‌ ಪಡೆಯಲಾಗುತ್ತಿತ್ತು. ಇದೇ ಮೊದಲು ಜೀವಂತ ವ್ಯಕ್ತಿಯಿಂದ ಪಡೆದು ಕಸಿ ಮಾಡಿದ್ದೇವೆ’ ಎಂದು ತಿಳಿಸಿದರು.

ಆಸ್ಪತ್ರೆಯ ಉಪಾಧ್ಯಕ್ಷ ಎನ್‌.ಜಿ.ಭರತೀಶ ರೆಡ್ಡಿ, ವೈದ್ಯರಾದ ಆನಂದ್ ರಾಮಮೂರ್ತಿ, ಸುನೀಲ್ ಸಾನ್ವಿ, ಕಾರ್ತಿಕ್ ರಾಯಚೂರಕರ್, ರಾಜಕುಮಾರ್ ಪಿ.ವಾಧ್ವಾ ಭಾಗವಹಿಸಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !