ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುನರ್ವಸತಿ ಕೇಂದ್ರದಲ್ಲಿ ವಾಸ್ತವ್ಯ: ಭರವಸೆ

Last Updated 27 ನವೆಂಬರ್ 2020, 6:53 IST
ಅಕ್ಷರ ಗಾತ್ರ

ಎಚ್.ಡಿ.ಕೋಟೆ: ‘ಬುಡಕಟ್ಟು ಸಮು ದಾಯದಿಂದ ಮೇಲೆ ಬಂದಿರುವ ನನಗೆ ಆದಿವಾಸಿಗಳ ಸಮಸ್ಯೆ ತಿಳಿಯಲು ಪುನ ರ್ವಸತಿ ಕೇಂದ್ರಕ್ಕೆ ಬಂದಿದ್ದೇನೆ’ ಎಂದು ಸಚಿವ ಬಿ.ಶ್ರೀರಾಮುಲು ತಿಳಿಸಿದರು.

ತಾಲ್ಲೂಕಿನ ಭೀಮನಹಳ್ಳಿ ಬಳಿಯ ಮಾಸ್ತಿಗುಡಿ ಪುನರ್ವಸತಿ ಕೇಂದ್ರದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಗುರುವಾರ ನಡೆದ ಮೂಲ ಸೌಲಭ್ಯ, ಬುಡಕಟ್ಟು ಜನಾಂಗದ ಫಲಾನುಭವಿಗಳಿಗೆ ಕುರಿ ಹಾಗೂ ಮಿಶ್ರತಳಿ ಹಸುಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಎಲ್ಲ ಮೂಲಸೌಲಭ್ಯ ಸಿಗುತ್ತದೆ ಎಂದಿದ್ದ ಆದಿವಾಸಿ ಗಿರಿಜನರಿಗೆ ಇದು ವರೆಗೂ ಸೌಲಭ್ಯ ಸಿಕ್ಕಿಲ್ಲ ಎಂದರು.

ಈ ಪುನರ್ವಸತಿ ಕೇಂದ್ರದಲ್ಲಿ 177 ಕುಟುಂಬಗಳು ಇವೆ. ಸರ್ಕಾರ ಇವರಿಗೆ 664 ಎಕರೆ ಜಮೀನು ಕೊಟ್ಟಿದೆ. ಆದರೆ, ಇನ್ನೂ ಹಕ್ಕು ಪತ್ರ ಕೊಟ್ಟಿಲ್ಲ. ಈ ಬಗ್ಗೆ ಸಂಬಂಧಿಸಿದ ಸಚಿವರು ಮತ್ತು ಮುಖ್ಯಮಂತ್ರಿ ಜತೆ ಚರ್ಚಿಸಿ ಹೆಚ್ಚಿನ ಅನುದಾನ ಬಿಡುಗಡೆಗೆ ಕ್ರಮ ವಹಿಸುವುದಾಗಿ ತಿಳಿಸಿದರು.

ಕೇಂದ್ರದಲ್ಲಿ ‘ರೈತ ಉತ್ಪಾದನಾ ಸಂಸ್ಥೆ’ ಪ್ರಾರಂಭಿಸಲಾಗುವುದು. ಮುಂದಿನ ದಿನಗಳಲ್ಲಿ ಇಲ್ಲಿಗೆ ಬಂದು ವಾಸ್ತವ್ಯ ಹೂಡುವುದಾಗಿ ತಿಳಿಸಿದರು.

ಶಾಸಕ ಸಿ.ಅನಿಲ್ ಕುಮಾರ್ ಮಾತನಾಡಿ, ಕಾರ್ಯಕ್ರಮದ ಬಗ್ಗೆ ಅಧಿಕಾರಿಗಳು ಯಾವುದೇ ಮಾಹಿತಿ ಕೊಟ್ಟಿಲ್ಲ. ಪೂರ್ವಭಾವಿಯಾಗಿ ಅಧಿಕಾರಿಗಳು ಚರ್ಚಿಸಿದ್ದರೆ ತಾಲೂಕಿನಲ್ಲಿರುವ ಪ್ರತಿ ಹಾಡಿಯಿಂದ ಒಬ್ಬೊಬ್ಬ ಮುಖಂಡರು ಇಲ್ಲಿಗೆ ಬರುತ್ತಿ ದ್ದರು. ಅವರ ಸಮಸ್ಯೆ ಬಗೆಹರಿಸಲು ಸುಲಭವಾಗುತ್ತಿತ್ತು. ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಈ ಬಗ್ಗೆ ಬೇಜವಾಬ್ದಾರಿ ತೋರಿದ್ದಾರೆ ಎಂದರು.

ಆಹ್ವಾನ ಪತ್ರಿಕೆಯಲ್ಲಿರುವಂತೆ ಕೇಂದ್ರದ ನಿವಾಸಿಗಳಿಗೆ ಯಾವುದೇ ಸೌಲಭ್ಯ ವಿತರಣೆ ಆಗಲಿಲ್ಲ ಎಂದು ಮುಖಂಡರು, ಜನ ಪ್ರತಿನಿಧಿಗಳು ದೂರಿದರು.

ಎಂ.ಶಿವಣ್ಣ, ಸಿದ್ದರಾಜು, ಗೀತಾ ನಟರಾಜು, ಸರೋಜಿನಿ ಬಲರಾಂ, ಪರೀಕ್ಷೀತರಾಜೇಅರಸ್, ಮೊತ್ತ ಬಸವರಾಜಪ್ಪ, ಎಚ್.ಟಿ.ಗಿರಿಗೌಡ, ತಹಶೀಲ್ದಾರ್ ನರಗುಂದ, ರಾಮಲಿಂಗಯ್ಯ, ಚಂದ್ರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT