ಸೋದರರ ನಡುವೆ ಕಲಹ; ಮಹಿಳೆ ಕೊಲೆ

7

ಸೋದರರ ನಡುವೆ ಕಲಹ; ಮಹಿಳೆ ಕೊಲೆ

Published:
Updated:

ಮೈಸೂರು: ತಾಲ್ಲೂಕಿನ ಕಡಕೊಳ ಗ್ರಾಮದಲ್ಲಿ 40x80 ಅಳತೆಯ ನಿವೇಶನಕ್ಕಾಗಿ ಅಣ್ಣ ತಮ್ಮಂದಿರ ನಡುವೆ ಶುಕ್ರವಾರ ನಡೆದ ಜಗಳದಲ್ಲಿ ತಮ್ಮನ ಪ‍ತ್ನಿಯ ಕೊಲೆಯಾಗಿದೆ. ಘಟನೆ ಇಡೀ ಗ್ರಾಮವನ್ನು ಬೆಚ್ಚಿ ಬೀಳಿಸಿದೆ.

ಕಾಂಚನಾ (45) ಕೊಲೆಯಾದವರು. ಅವರ ಪತಿ ದೇವಲಾಲ್ ಅವರ ಅಣ್ಣ ಬಹುರ್‌ ಲಾಲ್‌, ಪತ್ನಿ ಜಮುನಾ, ಪುತ್ರರಾದ ಸುನೀಲ್ ಹಾಗೂ ಸುಖೇಶ್ ಎಂಬುವವರನ್ನು ಕೊಲೆ ಆರೋಪದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಸೋದರರು ಒಟ್ಟಿಗೆ ವ್ಯವಹಾರ ಮಾಡುತ್ತಿದ್ದಾಗ ನಿವೇಶನ ತೆಗೆದುಕೊಂಡಿದ್ದು, ಅದರಲ್ಲಿ ಪಾಲು ನಮಗೂ ಬರಬೇಕು ಎಂದು ಕಾಂಚನಾ ಒತ್ತಾಯಿಸಿದ್ದಾರೆ. ಇದಕ್ಕೆ ಭಾವ ಬಹುರ್‌ ಲಾಲ್‌ ಕುಟುಂಬದವರು ಒಪ್ಪಿಲ್ಲ. ಈ ವೇಳೆ ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸುವ ಹಂತಕ್ಕೆ ಪರಿಸ್ಥಿತಿ ಹೋಗಿದೆ. ಈ ಸನ್ನಿವೇಶದಲ್ಲಿ ಕಾಂಚನಾ ಅವರ ತಲೆಗೆ ಬಿದ್ದ ದೊಣ್ಣೆ ಏಟಿನಿಂದ ತೀವ್ರವಾಗಿ ಗಾಯಗೊಂಡು ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಮೈಸೂರು ದಕ್ಷಿಣ ಠಾಣೆಯಲ್ಲಿ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !