ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಡಾಂಬರೀಕರಣಕ್ಕೆ ಚಾಲನೆ

Last Updated 25 ಸೆಪ್ಟೆಂಬರ್ 2019, 12:45 IST
ಅಕ್ಷರ ಗಾತ್ರ

ಮೈಸೂರು: ಲೋಕೋಪಯೋಗಿ ಇಲಾಖೆಯ ಅನುದಾನದಡಿ ₹ 30 ಲಕ್ಷ ಅಂದಾಜು ವೆಚ್ಚದಲ್ಲಿ, ನಗರದ 22ನೇ ವಾರ್ಡ್‌ನಲ್ಲಿನ ವಾಲ್ಮೀಕಿ ರಸ್ತೆಯ ಡಾಂಬರೀಕರಣ ಕಾಮಗಾರಿಗೆ ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಬುಧವಾರ ಚಾಲನೆ ನೀಡಿದರು.

‘ಕೆಆರ್‌ಎಸ್‌ ಮುಖ್ಯ ರಸ್ತೆಯಿಂದ ಹುಣಸೂರು ಮುಖ್ಯ ರಸ್ತೆ ಹಾಗೂ ಮಹಾರಾಣಿ ವಾಣಿಜ್ಯ ಕಾಲೇಜಿಗೆ ಮಾರ್ಗ ಕಲ್ಪಿಸುವ ರಸ್ತೆ ಇದಾಗಿದ್ದು, ವಾರ್ಡ್‌ನ ಅಭಿವೃದ್ಧಿಗೆ ಹಂತ ಹಂತವಾಗಿ ಅನುದಾನ ಬಿಡುಗಡೆ ಮಾಡಲಾಗುವುದು’ ಎಂದು ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಶಾಸಕರು ತಿಳಿಸಿದರು.

‘ಪಡುವಾರಹಳ್ಳಿಯ ವಾರ್ಡ್ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಅನೇಕ ಕೆಲಸ ಇಲ್ಲಿ ನಡೆದಿವೆ. ಇನ್ನೂ ಅನೇಕ ಕೆಲಸ ಆಗಬೇಕಿದೆ. ಅದಕ್ಕಾಗಿ ನಾನು ನಗರ ಪಾಲಿಕೆ ಸದಸ್ಯರಿಗೆ ಪೂರ್ಣವಾಗಿ ಸಹಕಾರ ನೀಡುತ್ತಿದ್ದೇನೆ. ಇಲ್ಲಿನ ಎಲ್ಲಾ ಸಮಸ್ಯೆಗಳನ್ನು ಇನ್ನು ಕೆಲವೇ ದಿನಗಳಲ್ಲಿ ಬಗೆಹರಿಸಿಕೊಡುವೆ’ ಎಂಬ ಭರವಸೆಯನ್ನು ನೀಡಿದರು.

ಇದೇ ಸಂದರ್ಭದಲ್ಲಿ ಗುತ್ತಿಗೆದಾರರಿಗೆ ಗುಣಮಟ್ಟವನ್ನು ಉಳಿಸಿಕೊಂಡು ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಶಾಸಕರು ಸೂಚಿಸಿದರು.

ನಗರ ಪಾಲಿಕೆಯ ಸದಸ್ಯರಾದ ಭಾಗ್ಯ ಮಹದೇಶ್, ಪ್ರಮೀಳಾ ಭರತ್, ಗುತ್ತಿಗೆದಾರರಾದ ಆಶೋಕ್, ಮುಖಂಡರಾದ ಚಿಕ್ಕವೆಂಕಟ್‌, ಸೋಮಶೇಖರರಾಜು, ನರೇಂದ್ರಬಾಬು, ದಿನೇಶ್‍ಗೌಡ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT